ಮೈಸೂರು: ಸಮಾಜದ ಅಂಕುಡೊಂಕುಗಳನ್ನ ತಮ್ಮ ಕಲೆಯ ಮೂಲಕವೇ ತೋರಿಸಿ ಅದನ್ನ ಸರಿಪಡಿಸುವಂತೆ ಸಾಮಾಜಿಕ ಜಾಲಾತಾಣಗಳ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನ ಕಲಾವಿದರೊಬ್ಬರು ಕಲೆಯನ್ನ ಈ ರೀತಿ ಸಮಾಜಕ್ಕೆ ಉಪಯೋಗ ರೀತಿಯಲ್ಲಿ ಮಾಡುತ್ತಿದ್ದಾರೆ. ಅದಕ್ಕೊಂದು ನಿದರ್ಶಶನ ಇಲ್ಲಿದೆ.
ಕಳೆದ ಮೂರು ನಾಲ್ಕು ತಿಂಗಳಿನಿಂದ ಜನನಿಬಿಡ ರಸ್ತೆಯಲ್ಲಿ ತೆರದ ಮ್ಯಾನ್ ಹೋಲ್ ಬಾಯ್ತೆರೆದು ನಿಂತಿತು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿರಲಿಲ್ಲ. ಇದರಿಂದ ಕಲಾವಿದ ಬಾದಲ್ ನಂಜುಂಡಸ್ವಾಮಿ ತೆರೆದ ಮ್ಯಾನ್ ಹೋಲ್ ಅದರ ಪಕ್ಕದಲ್ಲೇ ಸ್ವಚ್ಚ ಭಾರತದ ಗಾಂಧೀ ಕನ್ನಡಕದ ಚಿಹ್ನೆ ಹಾಕಿ ಸರಿಪಡಿಸುವಂತೆ ಬರೆದ ಚಿತ್ರ ವನ್ನ ಸಮಾಜಿಕ ಜಾಲಾತಾಣಗಳಲ್ಲಿ ಹಾಕಿ ಮಹಾನಗರ ಪಾಲಿಕೆಯ ಗಮನವನ್ನ ನಿನ್ನೆ ಸೆಳೆದಿದ್ದಾರೆ.
ಇದರಿಂದ ಎಚ್ಚೆತ್ತ ಪಾಲಿಕೆಯ ಅಧಿಕಾರಿಗಳು ಇಂದು ಈ ಮ್ಯಾನ್ ಹೋಲ್ ನ್ನ ಸರಿಪಡಿಸ ತೊಡಗಿದ್ದು ಕಲಾವಿದ ಕಲೆಯ ಮೂಲಕ ಸಮಾಜದ ಅಂಕುಡೊಂಕನ್ನ ಸರಿಪಡಿಸಬಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.