ಮೈಸೂರು: ಮೈಸೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಇಂದು ಸುಮಾರು ಹನ್ನೊಂದು ಗಂಟೆ ಸಮಯದಲ್ಲಿ ಗಾಯಿತ್ರಿಪುರಂ ನಿವಾಸಿ ಭರತ್ ಎಂಬುವರು ತಮ್ಮ ವರ್ಣ ಕಾರಿನಲ್ಲಿ ಚಾಮುಂಡಿ ಬೆಟ್ಟದ ಕಡೆಯಿಂದ ಚಲಿಸುತ್ತಿದ್ದಾಗ ಇದ್ದಕ್ಕಿಂದಂತೆ ಹಿಂಬದಿ ಟೈರ್ ಸ್ಪೋಟಗೊಂಡು ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ವಿದ್ಯುತ್ ವೇಗವಾಗಿ ಗುದ್ದಿದ ಪರಿಣಾಮವಾಗಿ ಐದು ವಿದ್ಯುತ್ ಕಂಬ ಜಕ್ಕಂಗೊಂಡು ನೆಲಕ್ಕೂರಿಳಿದ ಪರಿಣಾಮ ಪಕ್ಕದಲ್ಲಿದ್ದ ಬೈಕ್ ಗೆ ವಿದ್ಯುತ್ ಸ್ಪರ್ಶಿಸಿದರಿಂದ ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಈ ವೇಳೆ ಅವರ ಕಾರಿನ ಹಿಂಭಾಗ ಚಕ್ರ ಸ್ಫೋಟಗೊಂಡಿದೆ.
ಕಾರು ಅವರ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಬಲವಾಗಿ ಗುದ್ದಿದ್ದು, ಗುದ್ದಿದ ರಭಸಕ್ಕೆ 5 ವಿದ್ಯುತ್ ಕಂಬಗಳು ಧರೆಗುರುಳಿವೆ. ಇದೇ ಸಮಯದಲ್ಲಿ ಮಹಾನಗರಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರೋರ್ವರು ಇದೇ ಮಾರ್ಗವಾಗಿ ಬೈಕ್ ನಲ್ಲಿ ಸಾಗಿ ಬರುತ್ತಿದ್ದು, ಅದೃಷ್ಟವಶಾತ್ ವಿದ್ಯುತ್ ತಂತಿಗಳು ಉರುಳಿ ಬೀಳುತ್ತಿರುವುದನ್ನು ಕಂಡು ಬೈಕ್ ನಿಂದ ಜಿಗಿದಿದ್ದಾರೆ. ಇದರಿಂದ ಅವರಿಗೆ ಯಾವುದೇ ಅನಾಹುತವಾಗಿಲ್ಲ. ಆದರೆ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ ಅವರ ಬೈಕ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಆಗಮಿಸಿದ್ದಾರೆ. ಸಿದ್ದಾರ್ಥನಗರದ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಚೆಸ್ಕಾಂಗೂ ಮಾಹಿತಿ ನೀಡಲಾಗಿದ್ದು, ವಿದ್ಯುತ್ ಸ್ಥಗಿತಗೊಳಿಸಲಾಗಿದೆ.