ಮೈಸೂರು: ಡೈರಿ ವಿಚಾರದಿಂದ ಬಿಜೆಪಿ ಕಲಾಪವನ್ನ ವ್ಯರ್ಥ ಮಾಡುತ್ತಿಲ್ಲ, ಗಂಭೀರ ವಿಚಾರವಾದ ಕಾರಣ ಸದನದಲ್ಲಿ ವಿರೋದ ಪಕ್ಷವಾಗಿ ಬಿಜೆಪಿ ಸಮರ್ಥವಾಗಿ ಕೆಲಸ ಮಾಡುತ್ತಿದೆ ಎಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿಕೆ ನೀಡಿ ಮಾಧ್ಯಮದವರ ಮೇಲೆ ಕೋಪಗೊಂಡ ಪ್ರಸಂಗ ನಡೆಯಿತು.
ಮೈಸೂರಿನ ಚಾಮುಂಡಿ ತಪ್ಪಲಿನಲಿರುವ ಸುತ್ತೂರು ಶಾಖಾ ಮಠಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದು ಮಾಧ್ಯಮದವರೊಂದಿಗೆ ಮಾತನಾಡಿ ಯಡಿಯೂರಪ್ಪ, ಡೈರಿ ವಿಚಾರ ಬಿಜೆಪಿ ಕಲಾಪವನ್ನ ನುಂಗುತಿಲ್ಲ, ಗಂಭೀರ ವಿಚಾರವಾದ ಕಾರಣ ಸಭೆಯಲ್ಲಿ ವಿರೋದ ಪಕ್ಷವಾಗಿ ಬಿಜೆಪಿ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಅಧಿವೇಶನದಲ್ಲಿ ರಾಜ್ಯದ ಬರ, ರೈತರ ಸಾಲ ಮನ್ನ ಹಾಗೂ ಮುಂತಾದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ ಬಿಎಸ್.ವೈ ಸಹಾರ ಡೈರಿಗೂ ನಾನೂ ಆರೋಪಿಸಿದ ಡೈರಿಗೂ ಅಜಾಗಂಜಾಂತರ ವ್ಯತ್ಯಾಸವಿದೆ ಬೇಕಿದ್ದರೆ, ಕಾಂಗ್ರೆಸ್ ನವರು ಇದನ್ನ ಪ್ರಶ್ನಸಿ ಸುಪ್ರೀಮ್ ಕೋರ್ಟ್ ಗೆ ಹೋಗಲಿ. ನನ್ನದೇನು ಅಭ್ಯಂತರವಿಲ್ಲ ಎಂದು ಮಾಧ್ಯಮದವರ ಮೇಲೆ ಕೋಪಗೊಂಡ ಪ್ರಸಂಗ ನಡೆಯಿತು.
ಎಷ್ಟೇ ಸಚಿವರು ಬಂದರು ಎರಡು ಕ್ಷೇತ್ರ ಉಪಚುನಾವಣೆಯನ್ನ ಬಿಜೆಪಿ ಜಯಗಳಿಸಲಿದ್ದು, ಇದಕ್ಕಾಗಿ ಚುನಾವಣೆ ಮುಗಿಯುವವರೆಗೂ ಕ್ಷೇತ್ರದಲ್ಲಿ ಇರುತ್ತೇನೆ. ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾದ ಈ ಚುನಾವಣೆಯಲ್ಲಿ ಬಿಜೆಪಿ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದೆ. ಬರಗಾಲವಿದ್ದರೂ ಈ ಬಜೆಟ್ ನಲ್ಲಿ ರೈತರ ಸಾಲ ಮನ್ನ ಮಾಡದೆ ಸಿಎಂ ಓರ್ವ ರೈತರ ವಿರೋಧಿ ಎಂದು ಕಿಡಿ ಕಾರಿದ ಬಿಎಸ್ ವೈ ನಂಜನಗೂಡು ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಬೆಂಕಿ ಮಹದೇವ ಅವರ ಪತ್ನಿ ಹಾಗೂ ಕುಟುಂಬದ ಜೊತೆ ನಾನು ಮಾತನಾಡುತ್ತೇನೆ. ಶ್ರೀನಿವಾಸ್ ಪ್ರಸಾದ್ ಸಹ ಅವರ ಮನೆಗೆ ಭೇಟಿ ನೀಡಲಿದ್ದಾರೆ ಎಂದರು.
ಹಣ ಹಾಗೂ ಜಾತಿ ಬಲದಿಂದ ಕಾಂಗ್ರೆಸ್ ಉಪಚುನಾವಣೆಯನ್ನ ಗೆಲುತ್ತೇವೆ ಎಂಬ ಭ್ರಮೆಯಲ್ಲಿದ್ದು ಅದು ಎಂದಿಗೂ ಸಾಧ್ಯವಿಲ್ಲ ಎಂದರು.