ಮೈಸೂರು: 2018ರ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಎಂದು ಬಿಂದಿತವಾಗಿರುವ ಉಪಚುನಾವಣೆಯನ್ನ ಶತಯಾಗತಾಯ ಗೆಲ್ಲಲೇಬೇಕೆಂಬ ದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ಚುನಾವಣೆ ಪ್ರಚಾರಕ್ಕಾಗಿ 10 ದಿನಗಳ ಕಾಲ ಮೈಸೂರಿನಲ್ಲೇ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆ ಒಂದು ಕಡೆಯಾದರೆ ತಮ್ಮ ಪರಮಾಪ್ತ ದಿ.ಹೆಚ್.ಎಸ್ ಮಹದೇವಪ್ರಸಾದ್ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಗುಂಡ್ಲುಪೇಟೆ ಉಪಚುನಾವಣೆಯನ್ನ ಗೆಲ್ಲಲೇಬೇಕೆಂಬ ಒತ್ತಡದಲ್ಲಿದ್ದು, ಮುಂದಿನ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿಯಾಗಿರುವ ಈ ಚುನಾವಣೆಯನ್ನ ಗೆಲ್ಲಲು ಸ್ವತಹ 10 ದಿನಗಳ ಕಾಲ ಮೈಸೂರಿನ ತಮ್ಮ ಸ್ವಗೃಹದಲ್ಲಿ ಉಳಿದುಕೊಂಡು ಸ್ವತಹ ಪ್ರಚಾರದ ನೇತೃತ್ವವನ್ನ ವಹಿಸಿಕೊಂಡಿದ್ದು ಅದಕ್ಕಾಗಿ ಈಗಾಗಲೇ ಕಾರ್ಯತಂತ್ರವನ್ನ ರೂಪಿಸಿದ್ದಾರೆ.
ಮಾರ್ಚ್ 29ರಂದು ಮೈಸೂರಿನ ಟಿ.ಕೆ ಲೇಔಟ್ ನಲ್ಲಿರುವ ತಮ್ಮ ಸ್ವಗೃಹದಲ್ಲಿ ವಾಸ್ತವ್ಯ ಹೂಡಲಿರುವ ಅವರು, ಏಪ್ರಿಲ್ 7 ರ ರಾತ್ರಿ 8 ಗಂಟೆಯವರೆಗೆ ಮೈಸೂರಿನಲ್ಲಿ ಉಳಿಯಲಿದ್ದು ಪ್ರತಿ ದಿನ ಬೆಳಗ್ಗೆ 9 ಗಂಟೆಯಿಂದಲ್ಲೇ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಗೆ ಪಂಚಾಯತಿ ಪಟ್ಟದಲ್ಲಿ ಪ್ರಚಾರ ನಡೆಸಲಿದ್ದು, ಇವರಿಗೆ ಕ್ಯಾಬಿನೆಟ್ ನ 15 ಜನ ಸಚಿವರು ಸಾಥ್ ನೀಡಲಿದ್ದಾರೆ. ಪ್ರತಿದಿನ ಸಂಜೆ ಮೈಸೂರಿನ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದು ಉಪಚುನಾವಣೆ ಗೆಲ್ಲಲು ಕಾರ್ಯತಂತ್ರ ರೂಪಿಸಿಲಿದ್ದಾರೆ.
ಜೆಡಿಎಸ್ ಮತ ಸೆಳೆಯಲು ಕಾರ್ಯತಂತ್ರ:
ನಂಜನಗೂಡು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಮಾಡದೆ ತಟಸ್ಥವಾಗಿ ಉಳಿಯಲಿದೆ ಎಂದು ಜೆಡಿಎಸ್ ವರಿಷ್ಟ ಹೆಚ್.ಡಿ ದೇವೇಗೌಡ ಘೋಷಿಸಿದ ಹಿನ್ನಲ್ಲೆಯಲ್ಲಿ ಜೆಡಿಎಸ್ ನ ಸಂಪ್ರದಾಯಕ ಮತಗಳನ್ನ ಸೆಳೆಯಲು ಜೊತೆಗೆ ಪ್ರಮುಖ ನಾಯಕರನ್ನ ಸೆಳೆಯಲು ಸಿದ್ದರಾಮಯ್ಯ ಸ್ವತಹ ಮುತುವರ್ಜಿ ವಹಿಸಿ ಸ್ಥಳೀಯ ಪ್ರಭಾವಿ ನಾಯಕರುಗಳಿಗೆ ಸಿಎಂ ಸಿದ್ದರಾಮಯ್ಯ ಸ್ವತಹ ಫೋನ್ ಮಾಡಿ ಬೆಂಬಲಿಸುವಂತೆ ಈಗಾಗಲೇ ಕೇಳಿಕೊಳ್ಳುತ್ತಿದ್ದು ಉಪಚುನಾವಣೆ ಸಿಎಂ ಆಗಮನದ ನಂತರ ಮತ್ತಷ್ಟೂ ರಂಗೇರಲಿದೆ.