ಮೈಸೂರು: ಕೇಂದ್ರ ಸರ್ಕಾರದ ಬಿಇಎಂಎಲ್ ಕೈಗಾರಿಕಾ ಸಂಸ್ಥೆ ಆವರಣದ ಸಮೀಪ ಕಳೆದ 15 ದಿನಗಳಿಂದ ಕಾಣಿಸಿಕೊಂಡು ಸಾರ್ವಜನಿಕರು ಹಾಗೂ ಸಿಬ್ಬಂದಿಗೆ ಆತಂಕ ಮೂಡಿಸಿದ್ದ ಚಿರತೆ ಭಾನುವಾರ ಕೊನೆಗೂ ಬೋನಿಗೆ ಬಿದ್ದಿದೆ.
ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಬಿಇಎಂಎಲ್ ಕೈಗಾರಿಕಾ ಸಂಸ್ಥೆಯ ಸುತ್ತಮುತ್ತ ಆಗಾಗ ಕಾಣಿಸಿಕೊಳ್ಳುತ್ತಿದ್ದ ಒಂದೂವರೆ ವರ್ಷದ ಹೆಣ್ಣು ಚಿರತೆ ಬಗ್ಗೆ ಜನರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಬೋನನ್ನು ಇಟ್ಟು ತೆರಳಿದ್ದರು. ಈಗ ಚಿರತೆ ಬೋನಿಗೆ ಬಿದ್ದಿದ್ದು, ಚಿರತೆಯ ಘರ್ಜನೆ ಕೇಳಿದ ಜನರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಅಧಿಕಾರಿಗಳು ಬೋನಿಗೆ ಬಿದ್ದಿರುವ ಚಿರತೆಯನ್ನು ನಾಗರಹೊಳೆ ಅರಣ್ಯಕ್ಕೆ ಬಿಡಲು ಚಿಂತಿಸಿದ್ದಾರೆ. ಚಿರತೆ ಬೋನಿಗೆ ಬಿದ್ದಿರುವುದರಿಂದ ಬಿಇಎಂಎಲ್ ನೌಕರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.