ಮೈಸೂರು: ದುಷ್ಕರ್ಮಿಗಳು ಯುವಕನನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ. ರಾಘವೇಂದ್ರ ನಗರ ನಿವಾಸಿ ಸುರೇಶ್ ದುಷ್ಕರ್ಮಿಗಳಿಂದ ಹತ್ಯೆಯಾದ ಯುವಕ.
ಅನಾರೋಗ್ಯಕ್ಕಿಡಾದ ತನ್ನ ಮಗುವಿಗೆ ಔಷಧಿ ತರಲು ಮೆಡಿಕಲ್ ಸ್ಟೋರ್ ಗೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ.
ರಾಘವೇಂದ್ರ ನಗರದ ಜ್ಯೋತಿ ಕಾನ್ವೆಂಟ್ ಬಳಿ ತಡ ರಾತ್ರಿ ದುಷ್ಕರ್ಮಿಗಳು ಚಾಕುವಿನಿಂದ ಹೊಟ್ಟೆಗೆ ಇರಿದು ಹತ್ಯೆಗೈದಿದ್ದಾರೆ. ಸುರೇಶ್ ಎಂಬ ಈತ ಪೆಯಿಂಟ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ.
ತನ್ನ ಎರಡು ವರ್ಷದ ಮಗಳಿಗೆ ಅನಾರೋಗ್ಯವಾಗಿ ಔಷಧಿ ತರಲು ಮೆಡಿಕಲ್ ಷಾಪ್ ಗೆ ಬಂದಿದ್ದ ವೇಳೆ ಈ ಘಟನೆ ಸಂಭವಿಸಿದೆ. ಈ ಘಟನೆಗೆ ಇನ್ನೂ ಕಾರಣ ತಿಳಿದು ಬಂದಿಲ್ಲ.
ಉದಯಗಿರಿ ಠಾಣೆಯ ಪೋಲಿಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ್ದು, ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಕಂಡು ಹಿಡಿಯಲು ಬಲೆ ಬೀಸಿದ್ದಾರೆ.