ಮೈಸೂರು: ನಗರದ ನ್ಯಾಯಾಲಯದ ಮುಂಭಾಗ ಇರುವ ಗಾಂಧಿ ಪ್ರತಿಮೆಯ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ವಿವಿಧ ಘೋಷಣೆ ಕೂಗಿ ತಮ್ಮ ಆಕ್ರೋಷ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ ರಾಮಾನುಜರು ಪುಣ್ಯ ಪುರುಷರು, ಚಿಂತಕರು, ತತ್ವಜ್ಞಾನಿಗಳು ದೇಶಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಅಂತಹ ಮಹಾನ್ ದಿವ್ಯ ಪುರುಷರಾದ ರಾಮಾನುಜ ಸಹಸ್ರಮಾನೋತ್ಸವ ಆಚರಣೆಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ನಡೆಸುತ್ತಿದೆ.
ಸರ್ಕಾರ ಒಬ್ಬರಿಗೆ ಬೆಣ್ಣೆ ಮತ್ತೊಬ್ಬರಿಗೆ ಸುಣ್ಣ ಈ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ರಾಮಾನುಜ ಸಹಸ್ರಮಾನೋತ್ಸವ ಆಚರಣೆಗೆ ಹಣ ನೀಡುವಂತೆ ಮನವಿ ಸಲ್ಲಿಸಿ 2 ತಿಂಗಳಾದರೂ ಸಹ ಯಾವುದೇ ಪಯೋಜನೆ ಆಗಿಲ್ಲ. ಆದ್ದರಿಂದ ಸರ್ಕಾರದ ಗಮನ ಸೆಳೆಯಲು ಪ್ರತಿಭಟಿಸುತ್ತಿದ್ದು, ಈ ಕೂಡಲೇ ಸರ್ಕಾರ ಆಚರಣೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ವಿಪ್ರರು ಭಾಂದವರು ಪಾಲ್ಗೊಂಡಿದ್ದರು.