ಮೈಸೂರು: ಮರಳು ಗಣಿಗಾರಿಕೆಗೆ ಲಂಚ ಪಡೆಯುವಂತೆ ಪ್ರೇರೆಪಿಸಿದ ಪ್ರಕರಣಕ್ಕೆ ಸಂಬಂದಿಸಿದಂತೆ ಕೋರ್ಟ್ ಗೆ ಹಾಜರಾಗಿದ್ದ ಸಚಿವರ ಪುತ್ರನ ಪ್ರಕರಣದ ವಿಚಾರಣೆಯನ್ನ ಆರಂಭಿಸಿರುವ ನ್ಯಾಯಾಲಯವೂ ಮುಂದಿನ ವಿಚಾರಣೆಯನ್ನ ಏಪ್ರಿಲ್ 5ಕ್ಕೆ ಮೂಂದುಡಿದೆ.
ಮಾರ್ಚ್ ತಿಂಗಳ 6 ಮತ್ತು 14 ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಇಂದು ಸಹ ನ್ಯಾಯಾಲಯಕ್ಕೆ ಹಾಜರಾಗಿದ್ದು ಮರಳು ಗಣಿಗಾರಿಕಯಲ್ಲಿ ಅಂದಿನ ಗಣಿ ಮತ್ತು ಭೂ ವಿಜ್ಞಾನಿ ಅಲ್ಫೊಸಿಸ್ ಗೆ ಲಂಚ ಪಡೆಯುವಂತೆ ಪ್ರೇರೆಪಿಸಿದ ಪ್ರಕರಣದ ಚಾರ್ಚ್ ಶೀಟ್ ನಲ್ಲಿ ಉದ್ದೇಶ ಪೂರ್ವಕವಾಗಿ ಪ್ರಭಾವ ಬಳಸಿ ಆರೋಪಿ ಸ್ಥಾನದಿಂದ ಕೈಬಿಟ್ಟ ಬಗ್ಗೆ ಪ್ರಶ್ನಿಸಿದ ದೂರದಾರರ ಅರ್ಜಿ ಹಾಗೂ ಸಾಕ್ಷಿಯನ್ನ ಪರಿಗಣಿಸಿರುವ ನ್ಯಾಯಾಲಯವು ಸಚಿವರ ಪುತ್ರ ಸಹ ಆರೋಪಿ ಎಂದು ಘೋಷಿಸಿದೆ.
ಈ ಹಿನ್ನಲ್ಲೆಯಲ್ಲಿ ಇಂದಿನಿಂದ ನ್ಯಾಯಾಲಯದಲ್ಲಿ ಪ್ರಥಮ ಆರೋಪಿ ರಾಜು ಹಾಗೂ ಸುನೀಲ್ ಬೋಸ್ ಪ್ರಕರಣದ ವಿಚಾರಣೆಯನ್ನ ಆರಂಭಿಸಿರುವ ಮೈಸೂರಿನ ಮೂರನೇ ಜೆಎಂಎಫಸಿ ನ್ಯಾಯಾಲಯವು ಮುಂದಿನ ವಿಚಾರಣೆಯನ್ನ ಏಪ್ರಿಲ್ 5ಕ್ಕೆ ಮುಂದೂಡಿದೆ.