ಮೈಸೂರು: ಖಾತೆದಾರ ತನ್ನ ಕ್ರೆಡಿಡ್ ಕಾರ್ಡ್ ಸೇವೆಯನ್ನ ಸ್ಥಗಿತಗೊಳಿಸಲು ಖಾತೆಯಲ್ಲಿ ಬಾಕಿಯಿದ್ದ 5 ಪೈಸೆಯನ್ನ ಚೆಕ್ ಮೂಲಕ ನೀಡಿದ ಅಪರೂಪದ ಪ್ರಸಂಗ ನಗರದ ವಿಜಯನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಡೆದಿದೆ.
ವಿಜಯನಗರದ ಮೊದಲ ಹಂತದ ನಿವಾಸಿ ಸತೀಶ್ ಎಂಬುವವರು ವಿಜಯನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ 25 ಸಾವಿರ ಠೇವಣೆ ಹಣ ಇಟ್ಟು 5 ವರ್ಷಗಳ ಹಿಂದೆ ಕ್ರೆಡಿಡ್ ಕಾರ್ಡ್ ಪಡೆದಿದರು. ಆದರೆ ಕ್ರೆಡಿಡ್ ಕಾರ್ಡ್ ಬಳಕೆ ದುಬಾರಿಯಾದ ಹಿನ್ನಲ್ಲೆಯಲ್ಲಿ ಬೇಸತ್ತ ಸತೀಶ್ ತಮ್ಮ 25 ಸಾವಿರ ಠೇವಣಿ ಇಟ್ಟಿದ ಹಣವನ್ನ ವಾಪಸ್ಸ್ ಪಡೆದು ಕ್ರೆಡಿಡ್ ಕಾರ್ಡ್ ಸೇವೆಯನ್ನ ಹಿಂಪಡೆಯುವಂತೆ ಬ್ಯಾಂಕ್ ನವರಿಗೆ ಕೇಳಿದಾಗ ಕ್ರೆಡಿಟ್ ಕಾರ್ಡ್ ಸೇವೆಯನ್ನ ಪರೀಶಿಲಿಸಿದ ಬ್ಯಾಂಕ್ ನವರು ನಿಮ್ಮ ಖಾತೆಯಲ್ಲಿ 5 ಪೈಸೆ ಬಾಕಿಯಿದ್ದು ಅದನ್ನ ಪಾವತಿಸಿದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಸ್ಥಗಿತಗೊಳಿಸಬಹುದು ಎಂದು ಬ್ಯಾಂಕಿನವರು ಹೇಳಿದಾಗ, ಸತೀಶ್ ಬ್ಯಾಂಕಿವರು ತಮಾಷೆ ಮಾಡುತ್ತಿದ್ದಾರೆ ಎಂದು ಅನುಮಾನಗೊಂಡು ಪುನಹ ಬ್ಯಾಂಕಿನವರನ್ನ ಕೇಳಿದಾಗ ಬ್ಯಾಂಕಿನ ಹಣಕಾಸು ವ್ಯವಸ್ಥೆಯ ಪ್ರಕಾರ 5 ಪೈಸೆ ಬಾಕಿ ಪವಾತಿಸುವುದು ಅನಿರ್ವಾಯ ಎಂದು ಹೇಳಿದರು.
5 ಪೈಸೆ ಈಗ ಚಾಲ್ತಿಯಲ್ಲಿಲ್ಲ. ಈಗ 5 ಪೈಸೆ ಯನ್ನ ಎಲ್ಲಿಂದ ತರುವುದು ಎಂಬ ಜಿಗ್ಞಾಸೆಗೆ ಸಿಲುಕಿದ ಸತೀಶ್ ಗೆ ಬ್ಯಾಂಕ್ ನ ಸಿಬ್ಬಂದಿಯ ಸಲಹೆಯಂತೆ ಚೆಕ್ ಮೂಲಕ ಪಾವತಿಸಲು ಸೂಚಿಸಿದರು. ಅದರಂತೆ ಮಾರ್ಚ್ 18 ರಂದು ಎಸ್ ಬಿಐ ಬ್ಯಾಂಕಿನ ಚೆಕ್ ಮೂಲಕವೇ 5 ಪೈಸೆಯನ್ನ ಪಾವತಿಸಿದರು. ಈ ಪ್ರಕ್ರಿಯೆಗೆ 3 ರೂಪಾಯಿ ವೆಚ್ಚವಾಗಿದೆ ಎನ್ನುತ್ತಾರೆ ಸತೀಶ್.