ನಂಜನಗೂಡು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 12ನೇ ಬಜೆಟ್ ಮಂಡನೆ ಮಾಡಿದ ಹೆಗ್ಗಳಿಕೆಯಿದ್ದರೂ ತವರು ಜಿಲ್ಲೆ ಮೈಸೂರಿಗೆ ಅವರ ಕೊಡುಗೆ ಶೂನ್ಯ ಎಂದು ಸಂಸದೆ ಶೋಭ ಕರಂದ್ಲಾಜೆ ಆರೋಪಿಸಿದರು.
ಅವರು ತಾಲೂಕಿನ ದೇಬೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್ ಪರ ಪ್ರಚಾರ ನಡೆಸಿ ಮತಯಾಚಿಸಿ ಮಾತನಾಡಿದರು. ಅವರ ಸ್ವಕ್ಷೇತ್ರ ಕೌಲಂದೆ ಸೇರಿದಂತೆ ಬಹುಗ್ರಾಮ ಕುಡಿಯುವ ನೀರು ಒದಗಿಸಿ ಕೊಡಲು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರಬೇಕಾಯಿತು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿ ಗ್ರಾಮಕ್ಕೆ ಒಂದು ಸಾವಿರ ಮನೆಗಳ ಮಂಜೂರಾತಿಯಾಗಿತ್ತು. ಆದು ಈಗ 10ಕ್ಕೆ ಇಳಿದಿದೆ 1 ರೂ.ಗೆ 30 ಕೆಜಿ ಅಕ್ಕಿ ಪೂರೈಕೆ ಮಾಡುತ್ತೇನೆಂದು ಹೇಳಿದ್ದು, ಅದು ಈಗ 3 ಕೆಜಿಗೆ ಇಳಿದಿದೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಚುನಾವಣೆಯು ಪ್ರತಿಷ್ಠೆಯಾಗಿ ರೂಪುಗೊಳ್ಳತ್ತಿದೆ. ಇದರಿಂದ ಗೆಲುವು ಸಾಧಿಸಲು ಸಾವಿರಾರು ಕೋಟಿ ರೂ.ಗಳ ಅನುದಾನವನ್ನು ನೀಡುವ ಮೂಲಕ ಚುನಾವಣಾ ಗಿಮಿಕ್ ನಡೆಸುತ್ತಿದ್ದು ಅವರ ಅಭಿವೃದ್ದಿ ಕೆಲಸದಲ್ಲಿ ಪ್ರಾಮಾಣಿಕತೆ ಇಲ್ಲ ಇದನ್ನು ಜನರು ತುಲನೆ ಮಾಡುತ್ತಿದ್ದು ಅದರಿಂದ ಬಿಜೆಪಿ ಪಕ್ಷಕ್ಕೆ ಹೆಚ್ಚು ತೂಕ ಬಂದಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಹೆಚ್.ಎಸ್.ದಯಾನಂದಮೂರ್ತಿ, ಸದಾನಂದ, ಮಾಜಿ ಜಿಪಂ ಸದಸ್ಯರಾದ ಶಿವರಾಂ, ಬಿಜೆಪಿ ಉಪಾಧ್ಯಕ್ಷ ಕೆ.ಕೆ.ಜಯದೇವ್, ತಾಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ಪಣೀಶ್ ಸೇರಿದಂತೆ ಹಲವಾರು ಪ್ರಮುಖರು ಇದ್ದರು.