ಮೈಸೂರು: ಬೀಗರ ಔತಣ ಕಾರ್ಯಕ್ರಮದಲ್ಲಿ ಚಿಕನ್ ಸಾಂಬರಿನ ಪಾತ್ರೆ ಆಕಸ್ಮಿಕವಾಗಿ ಅಡುಗೆ ಸಹಾಯಕನ ಮೇಲೆ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವ್ನಪ್ಪಿರುವ ಘಟನೆ ನಗರದ ಉದಯಗಿರಿಯಲ್ಲಿ ನಡೆಯದಿದೆ.
ಹೀಗೆ ಮೃತಪಟ್ಟ ವ್ಯಕ್ತಿ ರಮೇಶ್ (21). ಈ ಕಳೆದ 15 ದಿನಗಳ ಹಿಂದೆ ಬೀಗರ ಔತಣ ಕಾರ್ಯಕ್ರಮದಲ್ಲಿ ಅಡುಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದು ಚಿಕನ್ ಸಾಂಬರ್ ಪಾತ್ರೆಯನ್ನ ಊಟದ ಹಾಲ್ ಗೆ ಸಾಗಿಸುವಾಗ ಆಕಸ್ಮಿಕವಾಗಿ ಪಾತ್ರೆ ಜಾರಿ ರಮೇಶ್ ಮೈ ಮೇಲೆ ಬಿದ್ದು ಶೇ 70 ರಷ್ಟು ಸುಟ್ಟಗಾಯಗಳಾಗಿದ್ದು ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತ ಪಟ್ಟಿದ್ದಾನೆ.
ಈ ಸಂಬಂದ ಉದಯಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.