ಮೈಸೂರು: ಮಾದ್ಯಮದವರು ಅವರ ಇತಿ ಮಿತಿಗಳಲ್ಲಿ ಕೆಲಸ ಮಾಡುತ್ತಾರೆಂಬ ವಿಶ್ವಾಸವಿದೆ, ಈ ಬಗ್ಗೆ ವಿಧಾನಮಂಡಲದಲ್ಲಿ ಬಹಳಷ್ಟು ಚೆರ್ಚೆಗಳಾಗಿವೆ, ಲೋಕಾಸಭೆಯಲ್ಲಿ ಚೆರ್ಚೆ ಮಾಡುವ ಅವಕಾಶವಿದೆ ಇದರಿಂದ ಮಾದ್ಯಮದ ಸ್ನೇಹಿತರು ಸಹ ಆ ಚೌಕಟನ್ನ ಮೀರದಂತೆ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಮಾದ್ಯಮದವರಿಗೆ ಕಡಿವಾಣ ಹಾಕಲು ಹೊರಟಿರುವ ಸರ್ಕಾರದ ಬಗ್ಗೆ ಮಾದ್ಯಮದವರೊಂದಿಗೆ ಮಾತನಾಡಿದ ಬಿ.ಎಸ್ ಯಡಿಯೂರಪ್ಪ, ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಈ ನಾಲ್ಕು ರಂಗಗಳು ಸಮಾಜದ ಪ್ರಜಾ ತಂತ್ರ ವ್ಯವಸ್ಥೆಯಲ್ಲಿ ಬಹಳಷ್ಟು ಸಮಾಜದ ಮೇಲೆ ಮುಖ್ಯವಾದ ಪಾತ್ರವನ್ನ ವಹಿಸುತ್ತವೆ. ಇದಕ್ಕೆ ಎಲ್ಲಾ ರೀತಿಯ ಸಹಕಾರವನ್ನ ಎಲ್ಲರೂ ಕೊಡಬೇಕು, ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಇನ್ನೂ ಎಸ್.ಎಂ ಕೃಷ್ಣ ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಂತಾಗಿದೆ. ಉಪಚುನಾವಣೆಯಲ್ಲಿ ಪ್ರಚಾರ ಮಾಡುವಂತೆ ಕೇಳಿಕೊಳ್ಳುತ್ತೇನೆ ಎಂದ ಬಿಎಸ್ ವೈ, ಇಂದು ಪ್ರಧಾನಿ ಮೋದಿ ಅವರನ್ನ ಬೇಟಿಯಾಗಿ ನಾಳೆ ಬೆಂಗಳೂರಿಗೆ ಬರುವ ಎಸ್.ಎಂ ಕೃಷ್ಣ ಅವರನ್ನ ಪಕ್ಷದ ಕಛೇರಿಗೆ ಆಹ್ವಾನಿಸುತ್ತೇನೆ. ಬೆಂಗಳೂರು, ಮಂಡ್ಯ ಹಾಗೂ ರಾಮನಗರದಲ್ಲಿ ಭಾಗದಲ್ಲಿ ಬಿಜೆಪಿ ವೀಕ್ ಇತ್ತು, ಎಸ್.ಎಂ ಕೃಷ್ಣ ಸೇರ್ಪಡೆಯಿಂದ ಹೆಚ್ಚಿನ ಬಲಬಂದಂತಾಗಿದೆ. ಬೆಂಗಳೂರಿನಲ್ಲಿ 25 ಸೀಟ್ ಗಳನ್ನ ಗೆಲುವ ವಿಶ್ವಾಸವಿದೆ ಎಂದರು.
ನಂಜನಗೂಡು ಮತ್ತು ಗುಂಡ್ಲಪೇಟೆ ಉಪಚುನಾವಣೆ ನಮ್ಮ ಪಕ್ಷದ ಅಭ್ಯರ್ಥಿಗಳು 25 ಸಾವಿರ ಮತಗಳ ಅಂತರದಿಂದ ಗೆಲುವ ವಿಸ್ವಾಸ ವ್ಯಕ್ತಪಡಿಸಿದ ಬಿಎಸ್ ವೈ ಶ್ರೀನಿವಾಸ್ ಪ್ರಸಾದ್ ಸೇರ್ಪಡೆಯಿಂದ ಈ ಎರಡು ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಶೇ 90ರಷ್ಟು ಮತದಾರರು ನಮ್ಮ ಪಕ್ಷಕ್ಕೆ ಮತ ಹಾಕುವ ವಿಶ್ವಾಸ ವ್ಯಕ್ತ ಪಡಿಸಿದರು.