ಮೈಸೂರು: ಕರ್ನಾಟಕ ಜನಪರ ವೇದಿಕೆ ವತಿಯಿಂದ ಪೆಪ್ಸಿಗೆ ಕೋಕ್ ನೀಡಿ ಎಳನೀರಿಗೆ ಕೈನೀಡಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಕೋಟೆ ಆಂಜನೇಯ ದೇವಸ್ಥಾನದ ಎದುರು ಶ್ರೀ ರಂಗಪಟ್ಟಣದ ಚಂದ್ರವನ ಮಠದ ಪೀಠಾಧಿಪತಿ ತ್ರೀನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮೀಜಿ ಪೆಪ್ಸಿ, ಕೋಲಾ ತಂಪು ಪಾನೀಯಗಳನ್ನು ರಸ್ತೆಗೆ ಸುರಿದರು. ಅಲ್ಲಿ ಸೇರಿದ ಸಾರ್ವಜನಿಕರಿಗೆ ಎಳನೀರು ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೆಪ್ಸಿ, ಕೋಲಾಗಳನ್ನು ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.ವಿದೇಶಿ ಕಂಪನಿಗಳು ಬಂಡವಾಳ ಸುರಿದು ಆರೋಗ್ಯ ಹಾಳುಮಾಡುವ ಪಾನೀಯಗಳನ್ನು ತಯಾರಿಸುತ್ತಿವೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮಹತ್ವ ನೀಡದೇ ರೈತರು ಬೆಳೆದ ಎಳನೀರನ್ನು ಸೇವಿಸಿ. ಈದೀಗ ಬರಪರಿಸ್ಥಿತಿ ಎದುರಾಗಿದ್ದು, ರೈತರ ಬೆಳೆಗಳಿಗೆ ಹಾನಿಯುಂಟಾಗಿದೆ. ನೈಸರ್ಗಿಕವಾಗಿ ಬೆಳೆಯುವ ವಸ್ತುಗಳನ್ನು ಸೇವಿಸಿದಲ್ಲಿ ಆರೋಗ್ಯ ಚೆನ್ನಾಗಿರುತ್ತದೆ. ಕಬ್ಬಿನ ಹಾಲು, ಮಜ್ಜಿಗೆ ನೀರುಗಳನ್ನು ಸೇವಿಸಿ. ಇದರಿಂದ ರೈತರಿಗೂ ನೆರವಾಗಲಿದೆ. ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಸಲಹೆ ನೀಡಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಹಾಗೂ ವೇದಿಕೆಯ ಸದಸ್ಯರು ಪಾಲ್ಗೊಂಡಿದ್ದರು.