ಮೈಸೂರು: ಅತಿ ವೇಗವಾಗಿ ಬಂದ ಕಾರು ರಸ್ತೆ ತಿರುವಿನಲ್ಲಿ ನಿಯಂತ್ರಣಕ್ಕೆ ಬಾರದೆ ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ಕು ಜನ ಮೃತ ಪಟ್ಟು ಮೂವರ ಸ್ಥತಿ ಗಂಭೀರವಾಗಿರುವ ಘಟನೆ ಹುಣುಸೂರು ಹೆಚ್.ಡಿ ಕೋಟೆ ಮಾರ್ಗ ಮಧ್ಯೆ ನಲ್ಲೂರು ಪಾಲಾ ಬಳಿ ನಡೆದಿದೆ.
ಪೋರ್ಡ್ ಎಂಡೆವರ್ ಕಾರ್ ಅಪಘಾತಕ್ಕೀಡಾಗಿದ್ದು, ಮೃತಪಟ್ಟವರನ್ನ ಕಿಶೋರ್ ಯಾದವ್, ಕೌಶೀಕ್ ಚೌಹಾನ್, ಘೋರ್ಪಡೆ, ರಂಜನ್ ಸಲಾಂಕಿ ಎನ್ನಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದ್ದು ಮೃತರನ್ನ ಬೆಂಗಳೂರಿನ ಹೊಸ್ ಕೇರ್ ಹಳ್ಳಿಯ ನಿವಾಸಿಗಳೆಂದು ಗುರುತಿಸಲಾಗಿದೆ. ಸ್ಥಳಕ್ಕೆ ಹುಣೂಸೂರು ಪೊಲೀಸರು ಧಾವಿಸಿದ್ದು ಮೃತ ದೇಹಗಳನ್ನ ಹುಣುಸೂರು ಸರ್ಕಾರಿ ಆಸ್ಪತ್ರೆಯ ಶಾವಾಗಾರದಲ್ಲಿ ಇರಿಸಿಲಾಗಿದೆ.