ಮೈಸೂರು: ಪ್ರವಾಸೋದ್ಯಮದ ಅಭಿವೃದ್ದಿ ದೃಷ್ಟಿಯಿಂದ ಕಳೆದ ಒಂದುವರೆ ವರ್ಷದಿಂದ ಸ್ಥಗಿತಗೊಂಡು ಕೇವಲ ವಿಐಪಿಗಳ ವಿಮಾನಗಳ ಹಾರಟಕ್ಕೆ ಮಾತ್ರ ಸೀಮಿತವಾಗಿರುವ ಮೈಸೂರಿನ ವಿಮಾನಯಾನ ಸೇವೆಯನ್ನ ಪುನಃ ಪ್ರವಾಸಿಗರಿಗೆ ಆರಂಭಿಸಬೇಕೆಂದು ವಿವಿದ ಸಂಘಟನೆಗಳು ಇ ಅರ್ಜಿ ಅಭಿಯಾನವನ್ನ ಆರಂಭಿಸಿದ್ದಾರೆ.
ನಗರದ ವಿವಿಧ ಸಂಘಟನೆಗಳು ಇ-ಅರ್ಜಿ ಅಭಿಯಾನವನ್ನ ಆರಂಭಿಸಿದ್ದು ಇದಕ್ಕಾಗಿ www.change.org ವೆಬ್ ಸೈಟ್ ಮೂಲಕ ಮನವಿಯನ್ನ ಸಲ್ಲಿಸಬಹುದಾಗಿದೆ. ಈ ಅಭಿಯಾನದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಿಮಾನಯಾನವನ್ನ ಪುನಃ ಆರಂಭಿಸುವಂತೆ ಇ-ಅರ್ಜಿಗಳನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ವಿಮಾನಯಾನ ಸಚಿವ ಗಜಪತಿರಾಜುಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದ್ದು ಈ ಹಿನ್ನಲ್ಲೆಯಲ್ಲಿ ಆನ್ ಲೈನ್ ಮೂಲಕ ಇ-ಸಹಿ ಸಂಗ್ರಹವನ್ನ ಆರಂಭಿಸಿದ್ದು 500ಕ್ಕೂ ಹೆಚ್ಚು ಜನ ಈಗಾಗಲೇ ಬೆಂಬಲ ಸೂಚಿಸಿದ್ದಾರೆ.
ಸಂಕಷ್ಟದಲ್ಲಿ ಪ್ರವಾಸೋದ್ಯಮ:
ಕಾವೇರಿ ಗಲಾಟೆ, ಬರ ಹಾಗೂ ಹಣದ ಅಮಾನ್ಯಕರಣದಿಂದ ಮೈಸೂರು ಪ್ರವಾಸೋದ್ಯಮ ಸಂಕಷ್ಟದಲ್ಲಿದ್ದು ಪ್ರವಾಸೋದ್ಯಮವೇ ಇಲ್ಲಿನ ಜನರ ಪ್ರಮುಖ ಆಧಾಯವಾಗಿದ್ದು ದೇಶ ವಿದೇಶಗಳಿಂದ ಪ್ರತಿವರ್ಷವೂ 30 ಲಕ್ಷಕ್ಕೂ ಜನ ಮೈಸೂರಿಗೆ ಬರುತ್ತಾರೆ. ಆದರೆ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಬಹುಮುಖ್ಯವಾಗಿ ವಿಮಾನಯಾನ ಸೇವೆ ಅಗತ್ಯವಾಗಿದ್ದು ಅಲ್ಲದೆ ಮೈಸೂರಿನ ಐಟಿ ಬಿಟಿ ಕಂಪನಿಗಳಿಗೆ ಆಗಮಿಸುವ ತಂತ್ರಜ್ಞರಿಗೂ ವಿಮಾನಯಾನ ಸೇವೆ ಅಗತ್ಯವಾಗಿದ್ದು, ಆದರೆ ಮೈಸೂರಿಗೆ ವಿಮಾನಯಾನ ಸೇವೆ ಸ್ಥಗಿತಗೊಂಡಿದ್ದು ಪ್ರವಾಸೋದ್ಯಮಕ್ಕೆ ಹೊಡೆತ ಬೀಳಲಿದೆ ಎನ್ನುತ್ತಾರೆ ಟ್ರಾವೆಲ್ ನಡೆಸುವ ವ್ಯಕ್ತಿಯೊಬ್ಬರು.
2009ರಲ್ಲಿ ಆರಂಭವಾದ ವಿಮಾನಯಾನ ಸೇವೆ ನಾಲ್ಕು ಬಾರಿ ಆರಂಭವಾಗಿ ನಾಲ್ಕು ಬಾರಿ ಸ್ಥಗಿತಗೊಂಡಿದ್ದು 2015ರ ನವೆಂಬರ್ ನಲ್ಲಿ ಪ್ರಯಾಣಿಕರ ಕೊರತೆಯಿಂದ ಸ್ಥಗಿತವಾದ ವಿಮಾನಯಾನ ಸೇವೆ ಇಲ್ಲಿಯವರೆಗೂ ಆರಂಭಗೊಂಡಿಲ್ಲ. ಇದರಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತವೇ ಆಗಿದ್ದು ಇದನ್ನ ನಂಬಿ ಜೀವನ ನಡೆಸುವ ಮೈಸೂರು ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತವಾಗಿದ್ದು, ಈ ಹಿನ್ನಲ್ಲೆಯಲ್ಲಿ ಶೀಘ್ರವೇ ವಿಮಾನಯಾನ ಸೇವೆಯನ್ನ ಆರಂಭಿಸಬೇಕೆಂದು ಇ-ಅರ್ಜಿ ಅಭಿಯಾನವನ್ನ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಮೈಸೂರು ಮಂಡಕಳ್ಳಿ ವಿಮಾನನಿಲ್ದಾಣದ ನಿರ್ದೇಶಕ ಮನೋಜ್ ಕುಮಾರ್ ಸಿಂಗ್ ಅವರನ್ನ ಮಾತನಾಡಿಸಿದಾಗ, ಮೈಸೂರಿನಿಂದ ವಿಮಾನಯಾವ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಯೋಜನೆ ರೂಪಿಸಿದೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ವಿಮಾನಯಾನ ಪುನಾರಂಭಿಸುವ ಎಲ್ಲಾ ಸಾಧ್ಯತೆಗಳು ಇದೆ ತಿಳಿಸಿದರು.