ಮೈಸೂರು: ನಿನ್ನೆ ಕೃತಜ್ಞತ ಸಮರ್ಪಣ ಕಾರ್ಯಕ್ರಮದಲ್ಲಿ ಎಸ್ಸಿಎಸ್ಟಿಗೆ ಉದ್ಯೋಗದಲ್ಲಿ ಶೇ 72ರಷ್ಟು ಮೀಸಲಾತಿ ತರುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಿಎಂ ಹೇಳಿಕೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ವಕೀಲರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ನಿನ್ನೆ ಬೆಂಗಳೂರಿನ ಅರಮನೆ ಆವರಣದಲ್ಲಿ ಏರ್ಪಡಿಸಿದ ಕೃತಜ್ಞತ ಸಮಾರೋಪ ಸಮಾರಂಭದಲ್ಲಿ ಎಸ್ಸಿಎಸ್ಟಿ ಪಂಗಡದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 72 ರಷ್ಟು ಮೀಸಲಾತಿ ತರುವ ಬಗ್ಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿರುವ ಹೇಳಿಕೆ ನಂಜನಗೂಡು-ಗುಂಡ್ಲಪೇಟೆ ಮತದಾರರನ್ನ ಸೆಳೆಯುವ ಉದ್ದೇಶದಿಂದ ಈ ರೀತಿ ಹೇಳಿಕೆ ನೀಡಿದ್ದಾರೆ. ಇದು ಮತದಾರರ ಮೇಲೆ ಪ್ರಭಾವ ಬೀಳುತ್ತದೆ ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಕ್ರಮಕೈಗೊಳ್ಳಬೇಕೆಂದು ನಂಜನಗೂಡು ಚುನಾವಣಾಧಿಕಾರಿ ಜಿ.ಜಗದೀಶ ಅವರಿಗೆ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹಾಗೂ ವಕೀಲ ಉಮೇಶ್ ಕುಮಾರ್ ದೂರು ಸಲ್ಲಿಸಿದ್ದಾರೆ.
ದೂರನ್ನ ಸ್ವೀಕರಿಸಿರುವ ನಂಜನಗೂಡು ಚುನಾವಣಾಧಿಕಾರಿ ಜೆ.ಜಗದೀಶ್ ಸಿಎಂ ವಿರುದ್ದ ದೂರು ಪ್ರಕರಣ ತಮ್ಮ ವ್ಯಾಪ್ತಿಗೆ ಬರದೆ ಇದ್ದುದರಿಂದ ಮುಂದಿನ ಕ್ರಮಕ್ಕೆ ಜಿಲ್ಲಾಧಿಕಾರಿ ಡಿ.ರಂದೀಪ್ ಅವರಿಗೆ ರವಾನೆ ಮಾಡಿದ್ದಾರೆ.