News Kannada
Monday, September 26 2022

ಮೈಸೂರು

ಚಾಮುಂಡೇಶ್ವರಿ ದೇಗುಲದ ಹುಂಡಿ ಏಣಿಕೆ ಮಾಡುವರಿಂದಲೇ ಕೈಚಳಕ: ನಾಲ್ವರ ಬಂಧನ - 1 min read

Photo Credit :

ಚಾಮುಂಡೇಶ್ವರಿ ದೇಗುಲದ ಹುಂಡಿ ಏಣಿಕೆ ಮಾಡುವರಿಂದಲೇ ಕೈಚಳಕ: ನಾಲ್ವರ ಬಂಧನ

ಮೈಸೂರು: ನಾಡ ಅದಿದೇವತೆ ಚಾಮುಂಡೇಶ್ವರಿ ದೇಗುಲದ ಹುಂಡಿ ಹಣವನ್ನ ಏಣಿಕೆ ಮಾಡುತ್ತಿರುವ ಸಂಧರ್ಭದಲ್ಲಿ ಹಣವನ್ನ ಕಳವು ಮಾಡಿದ್ದ ಮಹಿಳೆ ಸೇರಿದಂತೆ ನಾಲ್ವರನ್ನ ಕೆ.ಆರ್ ಪೊಲೀಸರು ಬಂದಿಸಿರುವ ಘಟನೆ ನಡೆದಿದೆ.  

ಬಂದಿತರನ್ನ ಸಚಿನ್ (24), ಜಗಧೀಶ(31), ವಿನೋದ್ (28), ಅನುಸೂಯ(48) ಎನ್ನಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲದ ಹುಂಡಿ ಹಣವನ್ನ ಏಣಿಕೆ ಮಾಡುಲಾಗುತ್ತದೆ. ಈ ಏಣಿಕೆ ಗುತ್ತಿಗೆಯನ್ನ ಕೆನರಾ ಬ್ಯಾಂಕ್ ಪಡೆದಿದ್ದು, ಮುಜಾರಾಯಿ ಇಲಾಖೆಯ ಅಧಿಕಾರಿಗಳ ಸಮೂಖದಲ್ಲಿ ಪ್ರಕ್ರಿಯೆ ನಡೆಯುತ್ತದೆ.

ನಿನ್ನೆ 60 ಜನ ಶ್ರೀಶಕ್ತಿ ಹಾಗೂ ಸ್ವಯಂ ಸೇವಾಕ ಸಂಘದವರು ಹಾಗೂ 25 ಬ್ಯಾಂಕ್ ಸಿಬ್ಬಂದಿಗಳು ದೇಗುಲದ 8 ಹುಂಡಿಗಳನ್ನ ಒಡೆದು ಹಣವನ್ನ ಏಣಿಕೆ ಮಾಡುತ್ತಿದ್ದರು. ಈ ಸಂಧರ್ಭದಲ್ಲಿ ಸ್ವಯಂ ಸೇವಾಕರಾದ ಈ ನಾಲ್ಕು ಜನ ಆರೋಪಿಗಳು ಹಣ ಏಣಿಸುವಾಗ ಅನುಮಾನಸ್ಪದವಾಗಿ ವರ್ತಿಸುತ್ತಿದ್ದನ್ನ ಕಂಡ ಬ್ಯಾಂಕ್ ಸಿಬ್ಬಂದಿಯವರು ತಕ್ಷಣ ಕೆ.ಆರ್ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡರು.

ಸಿಸಿಟಿವಿಯಿಂದ ಸಿಕ್ಕಿಬಿದರು:
ಸ್ಥಳಕ್ಕೆ ದಾವಿಸಿದ ಕೆ.ಆರ್ ಪೊಲೀಸರು ಮೊದಲು ಏಣಿಕೆಗೆ ಅಳವಡಿಸಿದ ಸಿಸಿಟಿವಿಯನ್ನ ಪರೀಶಿಲಿಸಿದಾಗ ಈ ನಾಲ್ವರು ಆರೋಪಿಗಳು ಹಣ ಕದ್ದಿರುವುದು ಗೊತ್ತಾಗಿದೆ. ತಕ್ಷಣ ನಾಲ್ವರನ್ನ ವಶಕ್ಕೆ ಪಡೆದ ಪೊಲೀಸರು ಗುಪ್ತವಾಗಿ ಪರಿಶೀಲಿಸಿದಾಗ 66 ಸಾವಿರದ 160 ರೂಪಾಯಿ ಹಣ ಕದ್ದಿರುವುದು ಗೊತ್ತಾಗಿದೆ.

ಕೂಡಲೇ ಆರೋಪಿಗಳನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಯಿತು.

See also  ಸಾರ್ವಜನಿಕರಿಗೆ ತೊಂದರೆಯಾಗುವ ಗಣಿಗಾರಿಕೆ ಬೇಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು