News Kannada
Sunday, September 25 2022

ಮೈಸೂರು

ಆತಂಕ ಬಿಡಿ ನೆಮ್ಮದಿಯಿಂದ ಪರೀಕ್ಷೆ ಎದುರಿಸಿ - 1 min read

Photo Credit :

ಆತಂಕ ಬಿಡಿ ನೆಮ್ಮದಿಯಿಂದ ಪರೀಕ್ಷೆ ಎದುರಿಸಿ

ಮೈಸೂರು: ರಾಜ್ಯಾದಂತ ಎಸ್ಎಸ್ಎಲ್ಸಿ ಪರೀಕ್ಷೆ ಸೋಮವಾರದಿಂದ ಪ್ರಾರಂಭವಾಗಿದ್ದು ಮೊದಲನೇ ದಿನವೇ ಪರೀಕ್ಷೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಗುಲಾಬಿ ಹೂವಿನ ಗುಚ್ಛ ನೀಡುವ ಮೂಲಕ ಮಾಜಿ ಸಚಿವ ಎಸ್.ಎ.ರಾಮದಾಸ್ ಅವರು ಶುಭಹಾರೈಸಿ ಸ್ಥೈರ್ಯ ತುಂಬಿದರು.

ಬೆಳಿಗ್ಗೆ ನಗರದ ಲಕ್ಮೀಪುರಂನಲ್ಲಿರುವ ಜೆಎಸ್ಎಸ್ ಶಾಲೆಯ ಹೊರ ಅವರಣದಲ್ಲಿ ಪರೀಕ್ಷೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ರಾಮದಾಸ್ ಅವರು ಉತ್ತಮವಾಗಿ ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯುವಂತೆ ಹೇಳಿದರು. ಈ ವೇಳೆ ಮಾತನಾಡಿದ ಅವರು ಇಂದು ವಿದ್ಯಾರ್ಥಿಗಳು ಬರೆಯುತ್ತಿರುವ ಪರೀಕ್ಷೆ ಅವರ ಜೀವನದಲ್ಲೇ ಪ್ರಥಮವಾಗಿದ್ದು, ವರ್ಷ ಪೂರ್ತಿ ಕಾಯುತ್ತಿರುವ ದಿನವಾಗಿದೆ. ವಿದ್ಯಾರ್ಥಿಗಳು ನಿರಾಂತಕವಾಗಿ ನೆಮ್ಮದಿಯಿಂದ ತಮ್ಮ ಆತ್ಮ ಸ್ಥೈರ್ಯದಿಂದ ಪರೀಕ್ಷೆಯನ್ನು ಎದುರಿಸಿ, ಶಿಕ್ಷಣ ಕ್ಷೇತ್ರದ ರಾಜ್ಯದಲ್ಲಿ ಮೈಸೂರು 5ನೇ ಸ್ಥಾನದಲ್ಲಿದ್ದು, ಪ್ರಥಮ ಸ್ಥಾನಕ್ಕೆ ಬರುವತ್ತ ವಿದ್ಯಾರ್ಥಿಗಳು ಸಾಧನೆಗೈಯ್ಯಬೇಕು ಎಂದರು. ಕೆಲವು ಆಯ್ದ ಸರ್ಕಾರಿ ಶಾಲಾ ಮಕ್ಕಳಿಗೆ ಪರೀಕ್ಷೆ ಯಾವ ರೀತಿ ಎದುರಿಸಬೇಕು ಎಂಬುವುದರ ಬಗ್ಗೆ ನುರಿತ ಶೈಕ್ಷಣಿಕ ತಜ್ಞರಿಂದ ತರಬೇತಿಯನ್ನು ಕೊಟ್ಟಿರುವುದರಿಂದ ಪ್ರತಿವರ್ಷವೂ ಮೈಸೂರು ಫಲಿತಾಂಶದಲ್ಲಿ ಮುಂದೆ ಇರುತ್ತದೆ ಅದೇ ರೀತಿ ಈ ಬಾರಿಯಾದರು ಪ್ರಥಮ ಸ್ಥಾನವನ್ನು ಪಡೆಯಲಿ ಎಂಬ ನಿಟ್ಟಿನಲ್ಲಿ ಈ ಯೋಜನೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಮೈಸೂರಿನಲ್ಲಿ ಒಟ್ಟು 134 ಕೇಂದ್ರಗಳಲ್ಲಿ, ಅಂದರೆ ಸರಿ ಸುಮಾರು 39.323 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಅಂತಹ ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ಮತ್ತು ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ ಎಂದರು.

ಇವರೊಂದಿಗೆ ನಗರಪಾಲಿಕೆ ಸದಸ್ಯರಾದ ಬಿ.ವಿ. ಮಂಜುನಾಥ್, ಜಗದೀಶ್, ನಗರಪಾಲಿಕೆ ಮಾಜಿ ಸದಸ್ಯರಾದ ವಿದ್ಯಾಅರಸ್, ಮುಖಂಡರಾದ ಜೋಗಿಮಂಜು, ನೂರ್ಫಾತಿಮಾ, ವಡಿವೇಲು, ಕೃಷ್ಣ, ಬಾಲಕೃಷ್ಣ, ಸಂತೋಷ್, ನಾಗೇಂದ್ರ, ರೇಖಾ, ಅನ್ನಪೂರ್ಣ, ಮಂಜುಳಾ, ಹೇಮಂತ್ ಮುಂತಾದವರು ಇದ್ದರು.

See also  ದಲಿತ ಸಂಘಟನೆಗಳಿಂದ ಶಿಕ್ಷಣ ಸಚಿವರಿಗೆ ಬೆದರಿಕೆ: ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು