News Kannada
Thursday, September 29 2022

ಮೈಸೂರು

ಮೈಸೂರು ವಿಮಾನ ನಿಲ್ದಾಣಕ್ಕೆ ಪುನರ್ ಚಾಲನೆ ನೀಡುವಂತೆ ಒತ್ತಾಯ: ಟ್ರಾವೆಲ್ ಅಸೋಸಿಯೇಷನ್ ವತಿಯಿಂದ ಬೃಹತ್ ಕಾರ್ ರ್ಯಾಲಿ - 1 min read

Photo Credit :

ಮೈಸೂರು ವಿಮಾನ ನಿಲ್ದಾಣಕ್ಕೆ ಪುನರ್ ಚಾಲನೆ ನೀಡುವಂತೆ ಒತ್ತಾಯ:  ಟ್ರಾವೆಲ್ ಅಸೋಸಿಯೇಷನ್ ವತಿಯಿಂದ ಬೃಹತ್ ಕಾರ್ ರ್ಯಾಲಿ

ಮೈಸೂರು: ಟ್ರಾವೆಲ್ ಅಸೋಸಿಯೇಷನ್ ವತಿಯಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಪುನರ್ ಚಾಲನೆ ನೀಡುವಂತೆ ಒತ್ತಾಯಿಸಿ ಬೃಹತ್ ಕಾರ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.

ರ್ಯಾಲಿಯು ಮಂಡಕಳ್ಳಿ ವಿಮಾನನಿಲ್ದಾಣದಿಂದ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಕ್ತಾಯಗೊಂಡಿತು.

ರ್ಯಾಲಿಯಲ್ಲಿ  ಕರ್ನಾಟಕ ಟೂರಿಸಮ್ ಫೋರಮ್ ನ ಅಧ್ಯಕ್ಷ ಎಸ್. ಪ್ರಶಾಂತ್ ಮಾತನಾಡಿ 15,00,000 ಕ್ಕಿಂತ ಅಧಿಕ ಜನಸಂಖ್ಯೆ, 600 ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು, ಸ್ವಚ್ಛ ನಗರ ಎಂಬ ಕೀರ್ತಿ, 30,00,000 ಹೆಚ್ಚು ಪ್ರವಾಸಿಗರ ಭೇಟಿ ಹೊಂದಿರುವ ಈ ಸಾಂಸ್ಕೃತಿಕ ನಗರವು ಪ್ರವಾಸೋದ್ಯಮವನ್ನೇ ಪ್ರಮುಖ ಆದಾಯವನ್ನಾಗಿಸಿಕೊಂಡಿದೆ.

ಮೈಸೂರು ನಗರ ಹಾಗೂ ನಂಜನಗೂಡು ಕೈಗಾರಿಕೋದ್ಯಮಗಳ ಸಾಮೀಪ್ಯ ಮತ್ತು ಫಿಲಂ ಸಿಟಿಯ ಯೋಜನೆಯು ಮೈಸೂರು ವಿಮಾನ ನಿಲ್ದಾಣದ ಯಶಸ್ವಿ ಕಾರ್ಯ ನಿರ್ವಹಣೆಗೆ ಪ್ರಮುಖ ಕಾರಣವಾಗಲಿದೆ. ಇದರ ವರದಿಗಳ ಪ್ರಕಾರ ಕಣ್ಣೂರಿನ ಕಣ್ಣೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸೆ.2017 ರಲ್ಲಿ ಪ್ರಾರಂಭಗೊಳ್ಳಲಿದ್ದು, ಪ್ರವಾಸಿಗರನ್ನು ಕೇರಳ ರಾಜ್ಯದತ್ತ ಸೆಳೆಯುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಅದಕ್ಕೂ ಮುಂಚಿತವಾಗಿ ಮೈಸೂರು ವಿಮಾನ ನಿಲ್ದಾಣ  ಪುನರ್ ಆರಂಭಗೊಳ್ಳದೇ ಇದ್ದರೇ ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ಜನರಿಗೆ ಆರ್ಥಿಕವಾಗಿ ಭಾರೀ ಹಾನಿಯುಂಟಾಗಲಿದೆ. ಈ ವಿಷಯಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ  ಮಾನವೀಯ ಪ್ರತಿಗಳನ್ನು ತಲುಪಿಸಲಾಗಿದೆ ಎಂದು ತಿಳಿಸಿದರು.

ರ್ಯಾಲಿಯಲ್ಲಿ ಟ್ರಾವೆಲ್ ಅಸೋಸಿಯೇಷನ್ ಮುಖ್ಯಸ್ಥರಾದ ಜಯಕುಮಾರ್, ನಾರಾಯಣ್ ಗೌಡ, ನಾಗರಾಜು, ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

See also  ಪೋಷಕರ ಬರುವಿಕೆಗಾಗಿ ಕಾಯುತ್ತಿದೆ ಈ ಪುಟ್ಟ ಕಂದಮ್ಮ…
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು