ಮೈಸೂರು: ಉಪಚುನಾವಣೆಯಲ್ಲಿ ಪೊಲೀಸನವರೆ ತಮ್ಮ ವಾಹನಗಳಲ್ಲಿ ಹಣ ಸಾಗಿಸುತ್ತಿದ್ದು ಸಿಎಂ ದೊಡ್ಡ ಪ್ರಮಾಣದ ಹಣವನ್ನ ತಂದಿದ್ದು ಅವರಿಗೆ ಹಣದ ಕೊರತೆಯಿಲ್ಲ ಎಂದು ಬಿಎಸ್ ಯಡಿಯೂರಪ್ಪ ನಂಜನಗೂಡಿನಲ್ಲಿ ಹೊಸ ಬಾಂಬ್ ಹಾಕಿದ್ದಾರೆ.
ಉಪಚುನಾವಣೆಯನ್ನ ಗೆಲಲ್ಲಬೇಕೆಂದು ಸಿಎಂ ಸಿದ್ದರಾಮಯ್ಯ ದೊಡ್ಡ ಪ್ರಮಾಣದ ಹಣವನ್ನೇ ತಂದಿದ್ದು ಅವರಿಗೆ ಹಣದ ಕೊರತೆ ಇಲ್ಲ. ಇಂತಹ ಹಣವನ್ನ ಉಪಚುನವಣೆಗೆ ಪೊಲೀಸ್ ವಾಹನಗಳಲ್ಲೆ ಸಾಗಟ ಮಾಡುತ್ತಿದ್ದು ಹಳ್ಳಿಗಳಲ್ಲಿ ಹಣ ಹಂಚಲು ಹೋದಾಗ ಸಿಕ್ಕಿ ಬಿಳುತ್ತಾರೆ. ಆಗ ಜನರೇ ಬುದ್ದಿ ಕಲಿಸುತ್ತಾರೆ ಹಣ ಬಲದಿಂದ ಚುನಾವಣೆ ಗೆಲಲ್ಲು ಸಾಧ್ಯವಿಲ್ಲ ಎಂದು ಬಿಎಸ್ ವೈ ನಿನ್ನೆ ಸಿಎಂ ಚುನಾವಣಾ ಪ್ರಚಾರದಲ್ಲಿ ಬಿಜೆಪಿಯವರು ಅಭಿವೃದ್ದಿ ವಿರೋಧಿ, ದಲಿತ ವಿರೋಧಿ ಜಾತಿವಾದಿಗಳು ಇವರಿಗೆ ಮತ ನೀಡಬೇಡಿ ಎಂದು ಪ್ರಚಾರ ಮಾಡಿದ್ದು, ನಿಜವಾಗಿ ಜಾತಿ ವಾದಿಗಳು ಅಭಿವೃದ್ದಿ ವಿರೋದಿಗಳು ಹಾಗೂ ದಲಿತ ವಿರೋದಿಗಳು ಕಾಂಗ್ರೆಸ್ ನವರು. ಇದಕ್ಕೆ ಉತ್ತರ ಪ್ರದೇಶ ಚುನಾವಣೆಯೇ ಸಾಕ್ಷಿಯಾಗಿದೆ ಎಂದರು.
ಉಪಚುನಾವಣೆಯಲ್ಲಿ 25 ಸಾವಿರ ಮತಗಳ ಅಂತರದಿಂದ ಎರಡು ಕ್ಷೇತ್ರಗಳನ್ನ ಗೆಲ್ಲುತ್ತೇವೆ ಎಂದರು.