ಮೈಸೂರು: ಚುನಾವಣೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ಕೊಡುತ್ತಿದ್ದು ಜೊತೆಗೆ ಅಕ್ರಮವಾಗಿ ಕಾಂಗ್ರೆಸ್ ನವರು ಮತದಾರರಿಗೆ ಹಣ ಮತ್ತು ಮಧ್ಯೆ ನೀಡುತ್ತಿದ್ದು ಮುಕ್ತವಾಗಿ ಉಪಚುನಾವಣೆ ನಡೆಯಲು ಕೇಂದ್ರ ಪಡೆಯನ್ನ ನಿಯೋಜನೆ ಮಾಡುವಂತೆ ಚುನಾವಣಾಧಿಕಾರಿಗಳಿಗೆ ಸಂಸದೆ ಶೋಭಾ ಕರದ್ಲಾಂಜೆ ದೂರು ನೀಡಿದರು.
ನಂಜನಗೂಡು ಉಪಚುನಾವಣೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಿಜೆಪಿ ಕಾರ್ಯಕರ್ತರಿಗೆ ಪ್ರಚಾರದ ಸಂಧರ್ಭದಲ್ಲಿ ಕಿರುಕುಳ ನೀಡುತ್ತಿದ್ದು ಬಿಜೆಪಿಯ ಕಮಲದ ಚಿಹ್ನೆ ಇರುವ ಶೆಲ್ಯವನ್ನ ಪ್ರಚಾರದ ಅವದಿಯಲ್ಲಿ ಹಾಕಿಕೊಳ್ಳದಂತೆ ನಿರ್ಬಂಧವಿಧಿಸಿರುವುದು ಜೊತೆಗೆ ಕಮಲದ ಚಿಹ್ನೆ ಇರುವ ಶೆಲ್ಯವನ್ನ ಕಿತ್ತುಕೊಂಡು ಅವಮಾನ ಮಾಡಿದ್ದಾರೆ. ಇವರು ಕಾಂಗ್ರೆಸ್ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಆದರಿಂದ ಇಲ್ಲಿನ ಅಧಿಕಾರಿಗಳು ಆಡಳಿತ ಸರ್ಕಾರದಂತೆ ಕೈಗೊಂಬೆಯಂತೆ ವರ್ತಿಸುತ್ತಿದ್ದು ಕೂಡಲೇ ಈ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಶೋಭಾ ಕರದ್ಲಾಂಜೆ ಚುನಾವಣಾಧಿಕಾರಿಗಳಿಗೆ ದೂರು ನೀಡಿದರು.
ಅಲ್ಲದೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಗಳ ತೋಟ ಹಾಗೂ ಕ್ವಾರೆಗಳಲ್ಲಿ ಮತದಾರರಿಗೆ ಅಕ್ರಮವಾಗಿ ಹಣ ಮತ್ತು ಮದ್ಯವನ್ನ ಹಂಚಲಾಗುತ್ತಿದೆ. ಇದರಿಂದ ನಿಕ್ಷಪಕ್ಷಪತವಾಗಿ ಚುನಾವಣೆ ನಡೆಸಲು ಸಾದ್ಯವಾಗುತ್ತಿಲ್ಲ, ಕೂಡಲೇ ಕೇಂದ್ರ ಪಡೆಯನ್ನ ನಿಯೋಜನೆ ಮಾಡಬೇಕೆಂದು ಸಂಸದೆ ಶೋಭಾ ಕರದ್ಲಾಂಜೆ ಮತ್ತೊಂದು ದೂರುನ್ನ ಸಲ್ಲಿಸಿದ್ದಾರೆ.