ಮೈಸೂರು: ನರೇಂದ್ರ ಮೋದಿ ಅವರು ಟೀ ಅಂಗಡಿ ಇಟ್ರೆ ಜನ ಹೋಗಿ ಟೀ ಕುಡಿಯುತ್ತಾರೆ ಆದ್ರೆ, ನಾನು ಟೀ ಅಂಗಡಿ ಟೀ ಕುಡಿಯೋದಿರಲಿ, ಅಂಗಡಿಯೊಳಗೆ ಕಾಲಿಡಲು ಹಿಂದು ಮುಂದು ನೋಡುತ್ತಾರೆ ಅಷ್ಟರ ಮಟ್ಟಿಗೆ ಬಿಜೆಪಿಯವರು ಧರ್ಮದ ಹೆಸರನಲ್ಲಿ ದೇಶವನ್ನ ಹಾಳು ಮಾಡಿದ್ದಾರೆ ಎಂದು ಲೋಕಾಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೇ ಕೇಶವ ಮೂರ್ತಿ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ಮಲ್ಲಿಕಾರ್ಜುನ ಖರ್ಗೆ, ನರೇಂದ್ರ ಮೋದಿ ನಾನು ಟೀ ಮಾಡಿ ಪ್ರಧಾನಿಯಾದೆ, ಅದನ್ನ ಯಾರು ಸಹಿಸುತ್ತಿಲ್ಲ ಎಂದು ಪ್ರತಿ ಭಾಷಣದಲ್ಲೂ ಹೇಳುತ್ತಾರೆ. ಆದರೆ ನರೇಂದ್ರ ಮೋದಿ ಅವರು ಟೀ ಮಾರಿದರೆ ಜನ ಹೋಗಿ ಟೀ ಕುಡಿಯುತ್ತಾರೆ, ಆದರೆ ನಾನು ಟೀ ಮಾರಿದರೆ ಟೀ ಕುಡಿಯುದರಲ್ಲಿ ಅಂಗಡಿಗೆ ಕಾಲಿಡಲು ಹಿಂದೂ ಮುಂದು ನೋಡುತ್ತಾರೆ. ಅಷ್ಟರ ಮಟ್ಟಿಗೆ ಬಿಜೆಪಿಯವರು ಧರ್ಮದ ಹೆಸರಿನಲ್ಲಿ ದೇಶವನ್ನ ಹಾಳು ಮಾಡಿದ್ದಾರೆ ಎಂದು ನರೇಂದ್ರ ಮೋದಿ ಭಾಷಣದ ಶೈಲಿಯಲ್ಲೇ ಕೈ ಚಪ್ಪಾಳೆ ತಟ್ಟಿ ವ್ಯಂಗ್ಯವಾಡಿದರು.
ಉಪಚುನಾಣೆ ಮಹತ್ವದ ಚುನಾವಣೆಯಾಗಿದ್ದು ಯಾವುದೇ ವೈಯಕ್ತಿಕ ಪ್ರತಿಷ್ಟೆಗಾಗಿ ನಡೆಯಬಾರದು. ಕಾಂಗ್ರೆಸ್ ರಾಜ್ಯದ ಸಮಸ್ಯೆಗಳಿಗೆ ಕಳೆದ ನಾಲ್ಕು ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಿದೆ, ನುಡಿದಂತೆ ನಡೆದ್ದೀವೆ. ಬಿಜೆಪಿಯವರು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದರಲ್ಲಿ ಮೂರನೇ ಸ್ಥಾನದಲ್ಲಿರುತ್ತಾರೆ ಎಂದು ಸಭೆಯಲ್ಲಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.