ಮೈಸೂರು: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ನಾವೆಲ್ಲರೂ ಪ್ರಧಾನಿ ಅವರನ್ನ ಬೇಟಿ ಮಾಡಿ ಮನವಿ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನಂಜನಗೂಡಿನಲ್ಲಿ ಹೇಳಿಕೆ ನೀಡಿದ್ದಾರೆ.
ಶತಾಯುಷಿಯ 110ನೇ ಜನ್ಮ ಶತಮಾನೋತ್ಸವವನ್ನ ನಂಜನಗೂಡಿನ ಯಾತ್ರಿಭವನ್ ದಲ್ಲಿ ಆಚರಿಸುತ್ತಿದ್ದು, ಚುನಾವಣಾ ಕೆಲಸದಿಂದ ಇಲ್ಲಿಯೇ ಆಚರಿಸುತ್ತಿದ್ದು, ಇಲ್ಲದಿದ್ದರೆ ತುಮಕೂರಿನಲ್ಲಿ ಆಚರಿಸುತ್ತಿದ್ದೆ ಎಂದ ಬಿಎಸ್ ವೈ ನಡೆದಾಡುವ ದೇವರು 110ನೇ ವರ್ಷದ ಆಚರಣೆ ಮಾಡಿಕೊಳ್ಳುತ್ತಿದ್ದು, ಇವರು ದೇಶಕಂಡ ಅದ್ಬುದ ವ್ಯಕ್ತಿಗಳಲ್ಲೊಬ್ಬರು. ಪ್ರತಿದಿನ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಅನ್ನದಾಸೋಹ ನಡೆಸುತ್ತಿರುವ ಇವರ ಕಾರ್ಯ ಶ್ಲಾಘನೀಯ ಎಂದರು.
ಇಂತಹವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ನಾವು ಸಚಿವರು, ಸಂಸದರು, ಪ್ರಧಾನಿಯವರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದರು.
ನಂತರ ಶ್ರೀಗಳ 110ನೇ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ ಬಿಎಸ್ ವೈ ಈ ವರ್ಷ ತುಮಕುರಿನಲ್ಲಿ 10 ಲಕ್ಷ ಜನ ಸೇರಿಸಿ ಪ್ರಧಾನಿಯವರನ್ನ ಕರೆಸಿ ದೊಡ್ಡ ಕಾರ್ಯಕ್ರಮವನ್ನ ನಡೆಸುತ್ತೇನೆ ಎಂದು ಹೇಳಿದರು.