ಮೈಸೂರು:ಉಪಚುನಾವಣೆ ಪ್ರಚಾರಕ್ಕೆ ಬಿಜೆಪಿ ನಾಯಕರ ದಂಡೇ ಆಗಮಿಸಿದ್ದು ಎಲ್ಲಾ ನಾಯಕರು ಸ್ಟಾರ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದು, ಆದರೆ ಮಾಜಿ ಕಾನೂನು ಸಚಿವ ಬಿಜೆಪಿ ಶಾಸಕ ಸುರೇಶ್ ಕುಮಾರ್ ಮಾತ್ರ ದನದ ಕೊಟ್ಟಿಗೆಯಲ್ಲಿ ವಾಸ್ತವ್ಯ ಹೂಡಿ ಚುನಾವಣಾ ಪ್ರಚಾರ ಮಾಡುತ್ತಿರುವುದು ವಿಶೇಷವಾಗಿದೆ.
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದಲೂ ಭೀಕರ ಬರಗಾಲ ತಾಂಡವ ಆಡುತ್ತಿದ್ದು ಜನ ಜಾನಾವಾರುಗಳಿಗೆ ನೀರು ಮೇವಿಲ್ಲದೆ ಪರಿತಪ್ಪಿಸುತ್ತಿದೆ. ಇಂತಹ ಸಂಧರ್ಭದಲ್ಲಿ ಭೀಕರ ಬರಗಾಲ ತಾಂಡವಾಡುತ್ತಿದ್ದು ಈ ಮಧ್ಯೆ ಎರಡು ರಾಜಕೀಯ ಪಕ್ಷಗಳ ಪ್ರತಿಷ್ಟೆಗಾಗಿ ನಂಜನಗೂಡು ಗುಂಡ್ಲಪೇಟೆ ಉಪಚುನಾವಣೆ ಬಂದಿದ್ದು ಕಾಂಗ್ರೆಸ್ ಚುನಾವಣೆಯನ್ನ ಗೆಲಲ್ಲೇಬೇಕೆಂಬ ಪ್ರತಿಷ್ಟೆಯಿಂದ ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದ ದಂಡೆ ಮೈಸೂರಿನಲ್ಲಿ ಬಿಡುಬಿಟ್ಟಿದ್ದು ಬಿಜೆಪಿ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾದ ಈ ಉಪಚುನಾವಣೆಯನ್ನ ಗೆಲ್ಲಲೇಬೇಕಾದ ಅನಿರ್ವಾಯತೆಯಿಂದ ರಾಜ್ಯಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಶೋಭಾ ಕರದ್ಲಾಂಜೆ ಈಶ್ವರಪ್ಪ ಸೇರಿದಂತೆ ರಾಜ್ಯದ ಪ್ರಮುಖ ನಾಯಕರಲ್ಲೆ ನಗರದ ಸ್ಟಾರ್ ಹೋಟೆಲ್ ಗಳಲ್ಲಿ ಕಳೆದ 15 ದಿನಗಳಿಂದ ವಾಸ್ತವ್ಯ ಹೂಡಿದ್ದು ಚುನಾವಣಾ ಪ್ರಚಾರಕ್ಕಾಗಿ ಇಲ್ಲಿಂದಲೇ ತೆರಳುತ್ತಿದ್ದಾರೆ.
ಮಾಜಿ ಕಾನೂನು ಸಚಿವ ಬಿಜೆಪಿ ಹಾಲಿ ಶಾಸಕ ಸುರೇಶ ಕುಮಾರ್ ನಂಜನಗೂಡು ಗುಂಡ್ಲಪೇಟೆ ಉಪಚುನಾವಣಾ ಪ್ರಚಾರಕ್ಕೆ ಮಾರ್ಚ್ 31 ರಂದು ಆಗಮಿಸಿದ್ದು ಪ್ರಚಾರ ಮುಗಿಸಿ ನಂಜನಗೂಡಿನಿಂದ 7 ಕಿ.ಮೀ ದೂರದಲ್ಲಿರುವ ಆಲಂಬೂರು ಮುಂಟಿ ಗ್ರಾಮದ ಬಿಜೆಪಿ ಕಾರ್ಯಕರ್ತ ಕಪಿಲೇಶ್ ಅವರ ತೋಟದ ಮನೆಯ ಧನಗಳ ಕೊಟ್ಟಿಗೆಯಲ್ಲಿ ಹಾಸಿಗೆ ಹಾಕಿಕೊಂಡು ಅಲ್ಲೇ ವಾಸ್ತಯ್ಯ ಹೂಡಿದ್ದು ಬೆಳಗ್ಗೆ 4.30ಕ್ಕೆ ಎದ್ದು ವಾಕಿಂಗ್ ಮಾಡಿ ನಂತರ ಅಲ್ಲೇ ಬೋರ್ ವೆಲ್ ನಲ್ಲಿ ಸ್ನಾನ ಮಾಡಿ ಪ್ರಚಾರಕ್ಕೆ ಹೊರಡುತ್ತಾರೆ.