News Kannada
Monday, October 03 2022

ಮೈಸೂರು

ಸುಳ್ಳಿನ ಸರದಾರ ಸಿದ್ದರಾಮಯ್ಯನವರಿಗೆ ನೋಬೆಲ್ ಪ್ರಶಸ್ತಿ ನೀಡಬೇಕು: ಈಶ್ವರಪ್ಪ - 1 min read

Photo Credit :

ಸುಳ್ಳಿನ ಸರದಾರ ಸಿದ್ದರಾಮಯ್ಯನವರಿಗೆ ನೋಬೆಲ್ ಪ್ರಶಸ್ತಿ ನೀಡಬೇಕು: ಈಶ್ವರಪ್ಪ

ಮೈಸೂರು: ಘೋಷಣೆಗಳ ಸರದಾರ, ಸುಳ್ಳಿನ ಸರದಾರ ಎಂಬ ವಿಚಾರಕ್ಕೆ ಈ ದೇಶದಲ್ಲಿ ನೋಬೆಲ್ ಪ್ರಶಸ್ತಿ ಕೊಡುವುದಿದ್ದರೆ ಸಿಎಂ ಸಿದ್ದರಾಮಯ್ಯನವರಿಗೆ ಕೊಡಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಮೈಸೂರಿನಲ್ಲಿ ಸಿಎಂ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಮರಳು ಮಾಫಿಯಾದಿಂದ ಡಿಸಿ ಹಾಗೂ ಎಸಿಯ ಮೇಲೆ ಕೊಲೆ ಯತ್ನ ನಡೆದಿದ್ದು ಈ ರಾಜ್ಯದಲ್ಲಿ ಸರ್ಕಾರ ಇದೆಯಾ ಎಂದು ಪ್ರಶ್ನೆ ಮಾಡಿದ ಈಶ್ವರಪ್ಪ, ಸರ್ಕಾರ ಮರಳು ಮಾಫಿಯಾದ ಕೈಯಲ್ಲಿ ಸಿಲುಕಿಕೊಂಡಿದೆ. ಇದಕ್ಕೆ ಲೋಕೋಪಯೋಗಿ ಸಚಿವ  ಸುನೀಲ್ ಬೋಸ್ ಮಗನೇ ಮರಳು ಮಾಫಿಯಾದ ನ್ಯಾಯಾಲಯದಲ್ಲಿ ಕೇಸ್ ಎದುರಿಸುತ್ತಿದ್ದು, ರಾಜ್ಯದಲ್ಲಿ ಪ್ರಮಾಣಿಕ ಅಧಿಕಾರಿಗಳ ಮೇಲೆ ಹಲ್ಲೆ ನಡೆಯುತ್ತಿದ್ದು ಅವರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದರು.

ರಾಜ್ಯದಲ್ಲಿ ಘೋಷಣೆಗಳ ಸರದಾರ, ಸುಳ್ಳಿ ಸರದಾರ ಎಂಬ ಖ್ಯಾತಿ ಹೊಂದಿರುವ ಸಿಎಂ ಸಿದ್ದರಾಮಯ್ಯನವರಿಗೆ ದೇಶದಲ್ಲಿ ಏನಾದರೂ ನೋಬೆಲ್ ಪ್ರಶಸ್ತಿ ಕೊಡುವುದಿದ್ದರೆ ಅದನ್ನ ಸಿಎಂ ಸಿದ್ದರಾಮಯ್ಯನವರಿಗೆ ಕೊಡಬೇಕು ಎಂದು ವಾಗ್ದಾಳಿ ನಡೆಸಿದ ಈಶ್ವರಪ್ಪ, ನನಗೆ ಬಿಜೆಪಿ ತಾಯಿ ಇದ್ದ ಹಾಗೇ. ಬಿಜೆಪಿಯನ್ನ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆ ಇಲ್ಲ ಎಂದು ಸಿಎಂಗೆ ತಿರುಗೇಟು ನೀಡಿದರು.

ಮಾದ್ಯಮಗಳ ಮೇಲೆ ಹಕ್ಕುಚುತಿ ವಿಚಾರ ಜಂಟಿ ಸದನ ಸಮಿತಿ ವಿಸರ್ಜನೆ ಮಾಡಿ ಎಂದು ಆಗ್ರಹಿಸಿದ ಈಶ್ವರಪ್ಪ, ನನಗೆ ತಲೆಕೆಟ್ಟಿದೆ, ತಲೆಯಲ್ಲಿ ಮೆದುಳುಲಿಲ್ಲ ಎಂದು ಪದೇ ಪದೇ ಟೀಕೆ ಮಾಡುತ್ತಾರೆ. ಆದರೆ ಅದನ್ನ ಸರಿಪಡಿಸಲು ನನ್ನ ಬಳಿ ಒಳ್ಳೆಯ ಡಾಕ್ಟರ್ ಇದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯನವರಿಗೆ ಹೇಳುವವರು ಕೇಳುವವರು ಯಾರು ಇಲ್ಲ. ನನಗೆ ಡಾಕ್ಟರ್ ಹೇಳಿದರೆ ಕೇಳುತ್ತೇನೆ ಆದರೆ ಸಿದ್ದರಾಮಯ್ಯ ಅದನ್ನು ಕೇಳುವುದಿಲ್ಲ ಎಂದರು.

See also  ಮೈಸೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ: ಆರೋಪಿ ಅರೆಸ್ಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು