News Kannada
Saturday, October 01 2022

ಮೈಸೂರು

ಲಾರಿ ಮುಷ್ಕರದ ಬಿಸಿ.. ಕೆಲಸವಿಲ್ಲದೆ ಪರದಾಡುತ್ತಿರುವ ಕೂಲಿ ಕಾರ್ಮಿಕರು - 1 min read

Photo Credit :

ಲಾರಿ ಮುಷ್ಕರದ ಬಿಸಿ.. ಕೆಲಸವಿಲ್ಲದೆ ಪರದಾಡುತ್ತಿರುವ ಕೂಲಿ ಕಾರ್ಮಿಕರು

ಮೈಸೂರು: ಲಾರಿ ಮಾಲೀಕರು ವಾಹನಗಳ ವಿಮೆ ಕಂತಿನ ದರ ಏರಿಕೆಯನ್ನು ಕೈಬಿಡುವಂತೆ ಆಗ್ರಹಿಸಿ ನಡೆಯುತ್ತಿರುವ ಲಾರಿ ಮುಷ್ಕರದದಿಂದಾಗಿ ನಗರದ ಕೂಲಿ ಕಾರ್ಮಿಕರು ಮೇಲೆ ಹೊಡೆತಬಿದ್ದಿದೆ, ರೈಲಿನಲ್ಲಿ ಬರುತ್ತಿದ್ದ ಸರಕು ಸಾಗಣೆಗಳನ್ನು ಎತ್ತುವರಿ ಮಾಡುತ್ತಿದ್ದ ಕಾರ್ಮಿಕರಿಗೆ ಕೆಲಸವಿಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ.

ನಗರದ ಅನೇಕ ನಿರ್ಮಾಣ ಕಾಮಗಾರಿಗಳು ಸ್ಥಬ್ಧವಾಗಿವೆ. ನಿತ್ಯ ಚಾಮರಾಜನಗರದಿಂದ ಮೈಸೂರಿಗೆ ಬರುವ ಅನೇಕ ಕೂಲಿಕಾರ್ಮಿಕರು ಬರಿಗೈಯಲ್ಲಿ ವಾಪಾಸ್ಸಾಗುತ್ತಿದ್ದಾರೆ. ಸತತ ಬರಗಾಲದಿಂದಾಗಿ ಕಂಗೆಟ್ಟಿರುವ ರೈತರು ಕೂಲಿಗಾಗಿ ನಗರ ಪ್ರದೇಶಗಳಿಗೆ ಬರುತ್ತಿದ್ದಾರೆ, ಆದರೆ ನಿತ್ಯ ಕಟ್ಟಡ ಕಾಮಗಾರಿಗಳಿಗೆ ಬೇಕಾಗುವ ಮರಳು, ಕಬ್ಬಿಣ, ಸಿಮೆಂಟ್ಗಳು ಲಭ್ಯವಾಗದ ಕಾರಣ ಗಾರೆ ಕೆಲಸಗಾರರು, ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಅಲ್ಲದೇ ರೈಲಿನಲ್ಲಿ ಬಂದಿರುವ ಸಿಮೆಂಟ್ ಎತ್ತುವಳಿಯಾಗಿಲ್ಲ, ಬೇರೆ ಬೇರೆ ರಾಜ್ಯಗಳಿಂದ ಬರಬೇಕಾಗಿದ್ದ ಕಬ್ಬಿಣವೂ ಬಂದಿಲ್ಲ.

ಜಿಲ್ಲೆಯಲ್ಲಿ ಮಂಗಳವಾರ ಬಿದ್ದಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಅಗತ್ಯ ರಸಗೊಬ್ಬರಗಳ ಕೊರತೆ ಸಾಧ್ಯತೆಯಿದ್ದು ಗುಜರಾತ್ನಿಂದ ರೈಲಿನಲ್ಲಿ ಬಂದಿರುವ ರಸಗೊಬ್ಬರ ಇನ್ನೂ ಎತ್ತುವಳಿಯಾಗಿಲ್ಲ. ಸದ್ಯ ಮಾರಾಟಗಾರಲ್ಲಿರುವ ದಾಸ್ತಾನು ಖಾಲಿಯಾದರೆ ಅಭಾವ ಉಂಟಾಗುವ ಸಾಧ್ಯತೆ ಇದೆ.

See also  ಯೋಗ ಕೇಂದ್ರದಲ್ಲಿ ಹೈಟೆಕ್ ವೇಶ್ಯವಾಟಿಕೆ:7 ಜನ ಬಾಂಗ್ಲಾ ಮೂಲದ ಯುವತಿಯರ ರಕ್ಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು