ಮೈಸೂರು: ಸಿದ್ದರಾಮಯ್ಯ ಎಲ್ಲಿವರೆಗೂ ಇರುತ್ತಾರೆ ರಾಜ್ಯಕ್ಕೆ ಅಲ್ಲಿವರೆಗೂ ದರಿದ್ರ ತಪ್ಪಿದ್ದಲ್ಲ. ತಲೆ ಕೆಟ್ಟು ಏನೇನೋ ಮಾತನಾಡುತ್ತಿದ್ದಾರೆ. ಸಚಿವ ಸಂಪುಟದ ಜೊತೆ ಬೀದಿ ಅಲೆಯುತ್ತಿದ್ದಾರೆ ಎಂದು ಚುನಾವಣಾ ಪ್ರಚಾರದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಇಂದು ನಂಜನಗೂಡಿನ ಅಶೋಕಪುರಂನಲ್ಲಿ ಬಾಬು ಜಗಜೀವನ್ ರಾಮ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪ್ರಚಾರ ಆರಂಭಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಎಲ್ಲಿವರೆಗೆ ಇರುತ್ತಾರೆ ಅಲ್ಲಿಯವರೆಗೆ ರಾಜ್ಯಕ್ಕೆ ದರಿದ್ರ ತಪ್ಪಿದಲ್ಲ. ನಾನು ಚಾಮರಾಜನಗರ ನಗರಕ್ಕೆ ಹೋಗಿಲ್ಲ ಅಂತಾ ಹೇಳುತ್ತಿದ್ದಾರೆ. ನಾನು ಕೊಡ್ಲಾ ಡೇಟ್ ಯಾವಾಗ ಹೋಗಿದ್ದೆ ಅಂತಾ ಸಿಎಂ ಸವಾಲ್ ಹಾಕಿದ್ದು, ಯಡಿಯೂರಪ್ಪಗೆ ನಗುಮುಖವೇ ಇಲ್ಲ ಅನ್ನೊ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ ಯಾರ ಮುಖ ಒಣಗಿದೆ ಅಂತಾ ಫಲಿತಾಂಶದ ದಿನ ಗೊತ್ತಾಗುತ್ತದೆ. ಅಧಿಕಾರ ಹೋಗತ್ತದೆ ಅಂತಾ ಭಯ ನನಗೆ ಇಲ್ಲ ಎಂದರು.
ನಾನು ಮೂಡ ನಂಬಿಕೆಯಲ್ಲಿ ನಂಬಿಕೆಯನ್ನೂ ಇಟ್ಟಿಲ್ಲ ಎಂದ ಬಿಎಸ್ ವೈ ರೈತರ ಸಾಲ ಮನ್ನಾ ಮಾಡಿ ಅಂತಾ ಸಿಎಂ ಕೇಂದ್ರಕ್ಕೆ ಯಾವಾಗಲೂ ನಿಯೋಗ ಕರೆದುಕೊಂಡು ಹೋಗಿಲ್ಲ. ನಾವು ಸಾಲ ಮನ್ನಾ ಮಾಡಿ ಅಂತಾ ಕೇಂದ್ರಕ್ಕೆ ಮನವಿ ಮಾಡಿಲ್ಲ, ಮಾಡೋದು ಇಲ್ಲ. ಸಾಲ ಮನ್ನಾ ಮಾಡೋದು ರಾಜ್ಯದ ಜವಾಬ್ದಾರಿ ಕೇಂದ್ರದಲ್ಲ ಎಂದು ವಾಗ್ದಾಳಿ ನಡೆಸಿದ ಬಿಎಸ್ ವೈ ಸಾರ್ವಜನಿಕರ ತೆರಿಗೆ ಹಣ ಲೂಟಿಯಾಗಿದೆ. ಇದರಲ್ಲೇ ಚುನಾವಣೆಗೆ ಖರ್ಚು ಮಾಡಿ ಗಿಮಿಕ್ ಮಾಡ್ತಿದ್ದಾರೆ ಎಂದು ಆರೋಪಿಸಿದರು.