News Kannada
Wednesday, September 28 2022

ಮೈಸೂರು

ಉಪಚುನಾವಣೆ ಗೆಲುವು ಯಡಿಯೂರಪ್ಪನವರಿಗೆ ಬಲ ತಂದು ಕೊಡುತ್ತದೆ: ಈಶ್ವರಪ್ಪ - 1 min read

Photo Credit :

ಉಪಚುನಾವಣೆ ಗೆಲುವು ಯಡಿಯೂರಪ್ಪನವರಿಗೆ ಬಲ ತಂದು ಕೊಡುತ್ತದೆ: ಈಶ್ವರಪ್ಪ

ಮೈಸೂರು: ಸಾದು ಸಂತರು ಜಾತಿ ಧರ್ಮವನ್ನ ಮೀರಿ ಸಮಾಜವನ್ನ ಒಂದುಗೂಡಿಸುತ್ತಿದ್ದು ಸಮಾಜದಲ್ಲಿ ಸಾಮರಸ್ಯವನ್ನ ಬೆಸಯುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿರೋದ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಕಳೆದ ಒಂದು ವಾರದಿಂದ ಉಪ ಚುನಾವಣಾ ಪ್ರಚಾರದ ನಿಮಿತ್ತ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ಕೆ.ಎಸ್ ಈಶ್ವರಪ್ಪ ಇಂದು ನಗರದ ಚಾಮುಂಡಿ ಬೆಟ್ಟದ ಪಾದದ ಬಳಿ ಇರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಧು ಸಂತರು  ಅಂದರೆ ಸಾಕ್ಷಾತ್ ಎದುರಲ್ಲಿ ಕಾಣಿಸುವ ದೇವರು ಅನ್ನೋ ಭಾವನೆ ನನ್ನದು. ಅವರು ಭೋಗ ತೊರೆದು ತ್ಯಾಗಿಗಳಾಗುತ್ತಾರೆ. ನಾವು ಭೋಗಿಗಳಾಗಿದ್ದೇವೆ. ಅವರು ಜಾತಿ, ಧರ್ಮವನ್ನು ಮೀರಿ ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಾರೆ. ಇದು ದೇಗುಲವಿದ್ದಂತೆ. ಇಲ್ಲಿ ಬಂದರೆ ಮನಸ್ಸು ಪ್ರಶಾಂತಗೊಂಡು ಒಳ್ಳೆಯ ಕೆಲಸಗಳಿಗೆ ಪ್ರೇರಣೆ ಸಿಗುತ್ತದೆ ಎಂದರು.

ನಂಜನಗೂಡು-ಗುಂಡ್ಲುಪೇಟೆ ಚುನಾವಣೆ ಕುರಿತು ಮಾತನಾಡಿದ ಅವರು ಅಲ್ಲಿನ ಹಳ್ಳಿಹಳ್ಳಿಯ ಪ್ರತಿಯೊಂದು ಮನೆಗೂ ತೆರಳಿ ಮತಯಾಚಿಸಿದ್ದೇನೆ. ರಾಜ್ಯದಲ್ಲಿ ಮುಂದೆ ಬಿಜೆಪಿ ಆಳ್ವಿಕೆ ಬಂದು ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಬೇಕು ಅನ್ನೋದು ಜನರ ಭಾವನೆ. ಎರಡೂ ಕಡೆ ಫಲಿತಾಂಶ ಬಿಜೆಪಿ ಪರವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಗುಂಡ್ಲುಪೇಟೆಯ ಆಚೆಗೆ ಎನ್ನಲಾಗುತ್ತದೆ. ರಾಹುಲ್ ಗಾಂಧಿಯೂ ಹಾಗೆಯೇ ಹೇಳುತ್ತಿದ್ದರು. ಆದರೆ ರಾಷ್ಟ್ರಪಟ್ಟದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಅವರೇ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಮುಕ್ತ ಭಾರತವನ್ನು ಮಾಡುವುದೇ ನಮ್ಮೆಲ್ಲರ ಗುರಿ ಎಂದರು.

See also  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಸಿಎಂ ಸಿದ್ಧರಾಮಯ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು