ಮೈಸೂರು: ನಮ್ಮ ಊರಿನಲ್ಲಿ ಓಟ್ ಹಾಕಲು ಬೂತ್ ಇಲ್ಲ, ಮೂಲ ಭೂತ ಸೌಕರ್ಯಗಳಿಲ್ಲ ಎಂದು ಮತದಾನವನ್ನ ಬಹಿಷ್ಕರಿಸಿದ ಘಟನೆ ನಂಜನಗೂಡು ತಾಲ್ಲೂಕಿನ ಮಹದೇವ ನಗರದಲ್ಲಿ ನಡೆದಿದೆ.
ನಂಜನಗೂಡು ಪಟ್ಟಣದಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಮಹದೇವಪುರ ಗ್ರಾಮದಲ್ಲಿ ಸುಮಾರು 700 ಮತದಾರರರಿದ್ದು ಇಲ್ಲಿ ಮತ ಚಲಾಯಿಸಲು ಪಕ್ಕದ ಊರಾದ ವೀರದೇವನಪುರಕ್ಕೆ ಹೋಗಬೇಕೆಂದು ಪ್ರತಿಭಟಸಿ ಮಹದೇವಪುರ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ನಮಗೆ ಮೂಲ ಭೂತ ಸೌಕರ್ಯ ಕಲ್ಪಿಸಿಕೊಡಬೇಕೆಂದು ಆಗ್ರಾಹಿಸಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಗ್ರಾಮಸ್ಥರನ್ನ ಸಮಾಧಾನಪಡಿಸಿದ್ದು, ತಮ್ಮ ಹಕ್ಕನ್ನ ಚಲಾಯಿಸುವಂತೆ ಮನವಿ ಮಾಡಿದ್ದು ಮದ್ಯಾಹ್ನದ ನಂತರ ಮತ ಚಲಾವಣೆ ಮಾಡುವುದಾಗಿ ಗ್ರಾಮಸ್ಥರು ಹೇಳಿದ್ದಾರೆ. ಒಂದು ಗಂಟೆ ಸುಮಾರಿಗೆ 700 ಮತಗಳಲ್ಲಿ ಕೇವಲ 11 ಜನ ಮಾತ್ರ ಮತ ಚಲಾವಣೆ ಮಾಡಿದ್ದಾರೆ.