News Kannada
Wednesday, October 05 2022

ಮೈಸೂರು

ವಿಶ್ವನಾಥ್ ಹೈಕಮಾಂಡ್ ಬೇಟಿಗೆ ದೆಹಲಿಗೆ ತೆರಳಿದ್ದೇಕೆ? - 1 min read

Photo Credit :

ವಿಶ್ವನಾಥ್ ಹೈಕಮಾಂಡ್ ಬೇಟಿಗೆ ದೆಹಲಿಗೆ ತೆರಳಿದ್ದೇಕೆ?

ಮೈಸೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹಿರಿಯ ನಾಯಕರನ್ನ ಹಾಗೂ ನಿಷ್ಟಾವಂತ ಕಾರ್ಯರ್ಕರತನ್ನ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಹೈಕಮಾಂಡ್ ಗೆ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ವಿರುದ್ದ ದೂರು ನೀಡಿ ತಮ್ಮ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಸಲು ಮಾಜಿ ಸಂಸದ ಹೆಚ್.ವಿಶ್ವನಾಥ್ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.  

ಪಕ್ಷದ ಹಿರಿಯ ನಾಯಕರ ವಿರುದ್ದ ಟೀಕೆ ಮಾಡಿದ ಕಾರಣದಿಂದ ಕೆಪಿಸಿಸಿಯಿಂದ ನೋಟೀಸ್ ಪಡೆದು ನೋಟೆಸ್ ಗೆ ಉತ್ತರ ನೀಡಿರುವ ಮಾಜಿ ಸಂಸದ ವಿಶ್ವನಾಥ್, ರಾಜ್ಯದಲ್ಲಿ ಕಾಂಗ್ರೆಸ್ ಯಿದ್ದರೂ ಹಿರಿಯ ಕಾಂಗ್ರೆಸ್ ಮುಖಂಡರನ್ನ ಹಾಗೂ ನಿಷ್ಟಾವಂತ ಕಾರ್ಯಕರ್ತರನ್ನ ಕಾಂಗ್ರೆಸ್ ಸರ್ಕಾರ ಕಡೆ ಗಣಿಸುತ್ತಿದ್ದು, ಇದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಷ್ಟ ವಾಗಲಿದೆ ಎಂಬ ವಿಚಾರವನ್ನ ಹೈಕಮಾಂಡ್ ಗೆ ಮನವರಿಕೆ ಮಾಡಲು ತೆರಳಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಮೊಬೈಲ್ ನಲ್ಲಿ ಮಾತನಾಡಿದ ವಿಶ್ವನಾಥ್, ನಾನು ಇಂದು ದೆಹಲಿಗೆ ಬಂದಿದ್ದೇನೆ. ಇಂದು ಸಂಜೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯನ್ನ ಬೇಟಿ ಮಾಡಲು ಸಮಯವನ್ನ ಅವರ ಆಪ್ತ ಸಹಾಯಕರಲ್ಲಿ ಕೇಳಿದ್ದು ಬೇಟಿಯ ಸಮಯ ಇನ್ನೂ ನಿಗದಿಯಾಗಿಲ್ಲ. ನಾನು ರಾಜ್ಯದ ಯಾವ ನಾಯಕರ ವಿರುದ್ದ ದೂರು ನೀಡಲು ಬಂದಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ ಗೆ ತಿಳಿಸಲು ಮಾತ್ರ ಆಗಮಿಸಿದ್ದೇನೆ ಎಂದ ವಿಶ್ವನಾಥ್, ಜೆಡಿಎಸ್ ಸೇರ್ಪಡೆ ವಿಚಾರ ಸದ್ಯಕ್ಕಿಲ್ಲ. ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನ ಶೀಘ್ರವೇ ನೇಮಕ ಮಾಡುವಂತೆ ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡಲಾಗುವುದೆಂದು ಇದೇ ಸಂಧರ್ಭದಲ್ಲಿ ವಿಶ್ವನಾಥ ತಿಳಿಸಿದರು.

ಉಪಚುನಾವಣೆಯಲ್ಲಿ ನಿರ್ಲಕ್ಷದ ಬೇಸರ:
ನಂಜನಗೂಡು ಗುಂಡ್ಲಪೇಟೆ ಉಪಚುನಾವಣೆಗೆ ಹೆಚ್.ವಿಶ್ವನಾಥ್ ಪ್ರಚಾರಕ್ಕೆ ಯಾವುದೇ ನಾಯಕರು ಆಹ್ವಾನ ನೀಡಲಿಲ್ಲ. ಜೊತೆಗೆ ಪ್ರಚಾರ ಸಭೆಯಲ್ಲಿ ವಿಶ್ವನಾಥ್ ಭಾವ ಚಿತ್ರ ಹಾಕಿರಲಿಲ್ಲ. ಅಲ್ಲದೆ ಯಾರು ಕರೆಯದಿದ್ದರು ನಂಜನಗೂಡು ಉಪಚುನಾವಣೆ ಪ್ರಚಾರಕ್ಕೆ ಹೋದರು, ಯಾವುದೇ ಕಾಂಗ್ರೆಸ್ ನಾಯಕರು ಇವರನ್ನ ಸ್ವಾಗತಿಸದೆ ಅವಮಾನ ಮಾಡಿದ್ದು, ಇದರಿಂದ ಬೇಸರಗೊಂಡಿರುವ ವಿಶ್ವನಾಥ್ ಹೈಕಮಾಂಡ್ ಗೆ ರಾಜ್ಯದ ಕಾಂಗ್ರೆಸ್ ಸ್ಥಿತಿಗತಿಯ ಬಗ್ಗೆ ತಿಳಿಸಿ ತಮ್ಮ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರ್ಪಡೆಯಾಗುವ ಬಗ್ಗೆ ಹೈಕಮಾಂಡ್ ಗೆ ತಿಳಿಸಲಿದ್ದಾರೆ ಎಂದು ಅವರ ಆಪ್ತ ಮೂಲಗಳು ಖಚಿತಪಡಿಸಿವೆ.

See also  ನಾವೂ ಪ್ರತಿದಿನವೂ ದಲಿತರ ಜೊತೆಯಲ್ಲೇ ಊಟ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು