ಮೈಸೂರು: ಅನುಕಂಪ ವಾರ್ಸಸ್ ಸ್ವಾಭಿಮಾನ ನಡುವೆ ನಡೆದ ನಂಜನಗೂಡು ಪ್ರತಿಷ್ಟಿತ ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಕಳಲೇ ಕೇಶವಮೂರ್ತಿ ಅನುಕಂಪದಿಂದ ಗೆಲುವು ಸಾಧಿಸಿದ್ದು, ಸ್ವಾಭಿಮಾನದಿಂದ ಚುನಾವಣೆಗೆ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಸೋಲು ಕಂಡಿದೆ, ಇದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಉತ್ತರ ಏನು ಎಂಬುದರ ಹಿನ್ನಲ್ಲೆಯಲ್ಲಿ ಈ ಸ್ಟೋರಿ.
ಸಿದ್ದರಾಮಯ್ಯ ಹಾಗೂ ಬಿಎಸ್ ಯಡಿಯೂರಪ್ಪ ನಡುವಿನ ಪ್ರತಿಷ್ಟಿಯ ಜಿದ್ದಾಜಿದ್ದಿನ ಕಣವಾಗಿದ್ದ ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೇ ಕೇಶವಮೂರ್ತಿ ಗೆಲುವು ಸಾಧಿಸುವ ಮೂಲಕ ಸಿದ್ದರಾಮಯ್ಯ ಗೆಲುವು ಸಾಧಿಸಿದಂತಾಗಿದ್ದು, ಈ ಗೆಲುವಿಗೆ ಕಾರಣಗಳು ಇಂತಿವೆ.
- ಕಾಂಗ್ರೆಸ್ ಅಭ್ಯರ್ಥಿ ಎರಡು ಬಾರಿ ಸೋಲು ಅನುಭವಿಸಿದ್ದು, ಸರಳ ಸಜ್ಜನ ರಾಜಕಾರಣಿ ಎಂಬ ವರ್ಚುಸ್ಸು ಕಾರಣವಾಗಿದೆ.
2. ಜೆಡಿಎಸ್ ಸಂಪ್ರದಾಯಕ ಮತಗಳು ಒಟ್ಟಾಗಿ ಕೇಶವಮೂರ್ತಿ ಪಾಲಾಗಿದೆ.
3. ಶ್ರೀನಿವಾಸ್ ಪ್ರಸಾದ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದ ನಂತರ ಕ್ಷೇತ್ರದ ಅಭಿವೃದ್ದಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಿಎಂ ವಿಶೇಷ ಆಸಕ್ತಿ ವಹಿಸಿ ಕೋಟಿ ಗಟ್ಟಲೆ ಅನುದಾನ ಬಿಡುಗಡೆ ಮಾಡಿದ್ದು ವರವಾಯಿತು.
4. ಸಿಎಂ ಖುದ್ದು ಪ್ರತಿಷ್ಟೆಯಾಗಿ ಉಪಚುನಾವಣೆಯನ್ನ ತೆಗೆದುಕೊಂಡು ಮೈಸೂರಿನಲ್ಲೇ ವಾಸ್ತವ್ಯ ಹೂಡಿ ಚುನಾವಣಾ ನೇತೃತ್ವ ವಹಿಸಿದ್ದ ಮತ್ತೊಂದು ಕಾರಣ.
5. ಸಂಪುಟದ ಸಚಿವರು ಶಾಸಕರು ಸಂಸದರು ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ ತಮ್ಮ ಜಾತಿ ಪ್ರಾಭ್ಯಲ್ಯದ ಕಡೆ ಕೆಲಸ ಮಾಡಿದ್ದು, ಗೆಲುವಿಗೆ ಕಾರಣವಾಗಿದೆ.
6. ಕೇಶವಮೂರ್ತಿ ಹಾಗೂ ಸಂಸದ ಧ್ರುವನಾರಾಯಣ್ ಉಪಚುನಾವಣೆ ಘೋಷಣೆಗೂ ಮುನ್ನ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದು ಸಹಾಯವಾಯಿತು.
7. ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರ ಯೋಜನೆಗಳ ಮೂಲಕ ಜನರಿಗೆ ಹಣದ ಹೊಳೆಯನ್ನೆ ಹರಿಸಿದರು.
8. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು ಅಭಿವೃದ್ದಿ ದೃಷ್ಟಿಯಿಂದ ಕೇಶವಮೂರ್ತಿಗೆ ಮತ ಹಾಕಿದ್ದಾರೆ.
9. ಹಿಂದೂಳಿದ ಹಾಗೂ ದಲಿತ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಕೇಶವಮೂರ್ತಿ ಪಾಲಾಗಿದೆ.
- ಇನ್ನೂ ಬಿ.ಎಸ್ ಯಡಿಯೂರಪ್ಪ ಪ್ರತಿಷ್ಟಿಯಾಗಿ ತೆಗೆದುಕೊಂಡ ಈ ಉಪಚುನಾವಣೆಯನ್ನ ಶ್ರೀನಿವಾಸ್ ಪ್ರಸಾದ್ ಸ್ವಾಭಿಮಾನಕ್ಕೆ ತೆಗೆದುಕೊಂಡು ಸೋಲು ಅನುಭವಿಸಲು ಕಾರಣ ಹಲವಾರು ಅವುಗಳು ಇಂತಿವೆ:
1. ದಲಿತ ಹಾಗೂ ಲಿಂಗಾಯಿತ ಮತಗಳು ಕ್ರೂಡಿಕರಣವಾಗಲಿಲ್ಲ.
2. ಅನಾರೋಗ್ಯದ ನಿಮಿತ್ತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಸಕ್ರಿಯವಾಗಿ ಚುನಾವಣೆಯಲ್ಲಿ ಪ್ರಚಾರದಲ್ಲಿ ಭಾಗವಹಿಸಲಿಲ್ಲ.
3. ಬಿಜೆಪಿ ಪಕ್ಷದಲ್ಲಿ ಸ್ಥಳೀಯ ಕಾರ್ಯಕರ್ತರ ನಿರ್ಲಕ್ಷ ಆರೋಪ.
4. ಬಿಜೆಪಿಗೆ ಸಂಪನ್ಮೂಲದ ಕೊರತೆ.
5. ಸಚಿವರಾಗಿದ್ದಾಗ ಶ್ರೀನಿವಾಸ್ ಪ್ರಸಾದ್ ಕ್ಷೇತ್ರಕ್ಕೆ ಯಾವುದೇ ಅಭಿವೃದ್ದಿ ಮಾಡಿರಲಿಲ್ಲ.
6. ನಂಜನಗೂಡು ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಸಂಪ್ರದಾಯಕ ಮತಗಳಿಲ್ಲ.
7. ಬಿಜೆಪಿ ಪಕ್ಷದಲ್ಲಿ ಗೆಲುವಿನ ಬಗ್ಗೆ ಅತಿಯಾದ ಆತ್ಮವಿಶ್ವಾಸ ಸೋಲಿಗೆ ಕಾರಣ.
8. ಯಡಿಯೂರಪ್ಪ ಅವರಿಗೆ ಪ್ರಚಾರದ ಸಂಧರ್ಭದಲ್ಲಿ ಸ್ಥಳೀಯ ನಾಯಕರಿಂದ ಸರಿಯಾದ ಪ್ರೋತ್ಸಾಹ ಸಿಗಲಿಲ್ಲ.
9. ಕಾಂಗ್ರೆಸ್ ನ್ನ ಅತಿಯಾಗಿ ಟೀಕೆ ಮಾಡಿದ್ದು ಬಿಜೆಪಿಗೆ ಮುಳುವಾಯಿತು.
10. ಸಂಸದ ಪ್ರತಾಪ್ ಸಿಂಹ ವಿವಾದತ್ಮಾಕ ಹೇಳಿಕೆ ನೀಡಿದ್ದು ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿದೆ.
ಇನ್ನು ಮೂಂತಾದ ಕಾರಣಗಳು ನಂಜನಗೂಡು ಬಿಜೆಪಿ ಸೋಲಿಗೆ ಕಾರಣವಾಗಿದ್ದು ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.