ಮೈಸೂರು: ಇನ್ಮುಂದೆ ಚುನಾಚಣೆಗೆ ನಿಲ್ಲುವುದಿಲ್ಲ, ಸಕ್ರಿಯವಾಗಿ ರಾಜಕೀಯದಲ್ಲಿ ಇರುತ್ತೇನೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಸೋಲಿನ ನಂತರ ತಮ್ಮ ಮನೆಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಘೋಷಣೆ ಮಾಡಿದ್ದಾರೆ.
ತಮ್ಮ ಸ್ವಗೃಹದಲ್ಲಿ ಉಪಚುನಾವಣೆಯಲ್ಲಿ ತಮ್ಮ ಸೋಲಿನ ಬಗ್ಗೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಸ್ವಾಭಿಮಾನಕ್ಕೆ ಸೋಲಾಗಿದ್ದು, ನಾನು ಇನ್ಮುಂದೆ ಚುನಾವಣೆಗೆ ನಿಲುವುದಿಲ್ಲ, ಆದರೆ ಸಕ್ರೀಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಹೇಳಿದ ಶ್ರೀನಿವಾಸ್ ಪ್ರಸಾದ್, ನಂಜನಗೂಡು ಉಪಚುನಾವಣೆಯಲ್ಲಿ ಹಣದ ಹೋಳೆಯೇ ಹರಿದಿದೆ. ಎರಡು ಲಕ್ಷ ಮತದಾರರಲ್ಲಿ 1.20 ಲಕ್ಷ ಸಾವಿರ ಮತದಾರರಿಗೆ ಹಣ ಹಂಚಿದ್ದು, ಸಿಎಂ ಆಪ್ತ ಕೆಂಪಯ್ಯ ಪೊಲೀಸ್ ಇಲಾಖೆಯನ್ನ ದುರುಪಯೋಗ ಮಾಡಿಕೊಂಡು ಹಣ ಹಂಚಿದ್ದಾರೆ ಎಂದ ಅವರು, ಇದಕ್ಕೆ ಸಾಕ್ಷಿ ಸಂಸದ ಧ್ರುವನಾರಾಯಣ್ ಆಪ್ತ ಸಹಾಯಕನೇ ಹಣ ಹಂಚುವಾಗ ಸಿಕ್ಕಿ ಬಿದಿದ್ದಾನೆ ಎಂದರು.
ಸಿಎಂ ಸಿದ್ದರಾಮಯ್ಯ ನಂಜನಗೂಡು ಉಪಚುನಾವಣೆಯಲ್ಲಿ ಮತದಾನದ ಪಾವಿತ್ರ್ಯೆತೆಯನ್ನ ಹಾಳು ಮಾಡಿದ್ದಾರೆ. ಹಣದ ಹೊಳೆಯನ್ನ ಹರಿಸಿ ಚುನಾವಣೆಯಲ್ಲಿ ಗೆದಿದ್ದಾರೆ. ಜನ ಸ್ವಾಭಿಮಾನಕ್ಕೆ ಮತ ಹಾಕಿಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಆರೋಪಿಸಿದರು.