ಮೈಸೂರು: ಬಂಡೀಪುರ ಅರಣ್ಯ ವಲಯದ ಸಫಾರಿಗಳ ಪ್ರಿನ್ಸ್ ಎಂಬ ಖ್ಯಾತಿಯ ಹುಲಿ ಸಾವು ಈಗ ಹಲವಾರು ಸಂಶಯ, ಅನುಮಾನಗಳಿಗೆ ಕಾರಣವಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಪ್ರವಾಸಿಗರ ಪ್ರದೇಶದಲ್ಲಿ ಪ್ರವಾಸಿಗರಿಗೆ ಧೈರ್ಯವಾಗಿ ದರ್ಶನ ಕೊಡುತ್ತಿದ್ದ ಪ್ರಿನ್ಸ್ 12 ವರ್ಷದ ಗಂಡು ಹುಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ಸಫಾರಿ ವಾಹನದ ಪಕ್ಕದಲ್ಲೇ ಧೈರ್ಯವಾಗಿ ತಿರುಗಾಡುತ್ತಿದ್ದ. ಈ ಪ್ರಿನ್ಸ್ ಹುಲಿಯನ್ನ ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಿದ್ದರು. ಇದರಿಂದ ಅರಣ್ಯ ಇಲಾಖೆಗೆ ಕಳೆದ ನಾಲ್ಕೈದು ವರ್ಷಗಳಲ್ಲಿ ಸುಮಾರು 20 ಕೋಟಿ ಆದಾಯ ತಂದು ಕೊಟ್ಟಿತ್ತು ಈ ಪ್ರಿನ್ಸ್ ಹುಲಿ.
ಸಾವಿನ ಸುತ್ತ ಸಂಶಯ:
ಕಳೆದ 13 ದಿನಗಳ ಹಿಂದೆ ಬಂಡೀಪುರದ ಕುಂದಕೆರೆ ವಲಯದ ಲೊಕ್ಕೆರೆ ವ್ಯಾಪ್ತಿಯಲ್ಲಿ ಪ್ರಿನ್ಸ್ ಹುಲಿಯ ಶವ ಸಿಕ್ಕಿತ್ತು. ಹುಲಿಯ ತಲೆಯ ಭಾಗ ಸಿಡಿದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಪ್ರಾಣಿಗಳ ಮಾಂಸ ಬೇಟೆಗಾಗಿ ಬೇಟೆಗಾರರು ಮಾಂಸಗಳಲ್ಲಿ ಸಿಡಿಯುವ ಸಿಡಿಮದ್ದನ ಹಾಕಿ ಪ್ರಾಣಿಗಳನ್ನ ಕೊಲ್ಲಲು ಬಳಸುತ್ತಿದ್ದು, ಈ ರೀತಿಯ ಸಿಡಿಮದ್ದನ ಹಾಕಿದ ಮಾಂಸವನ್ನ ತಿಂದ ಪ್ರಿನ್ಸ್ ಹುಲಿ ಸತ್ತಿರಬಹುದು ಎಂಬ ಸಂಶಯ ಅನುಮಾನಗಳು ಈಗ ಹುಟ್ಟಿಕೊಂಡಿವೆ. ಏಕೆಂದರೆ ಪ್ರಿನ್ಸ್ ಹುಲಿ ವಯಸ್ಸಾದ ಕಾರಣ ಆಹಾರಕ್ಕಾಗಿ ಬೇಟೆಯಾಡಲು ಸಾಧ್ಯವಾಗುತ್ತಿರಲಿಲ್ಲ. ಬೇಟೆಗಾರರು ಮಾಂಸದ ಮಧ್ಯ ಇಟ್ಟಿದ ಮಾಂಸವನ್ನ ತಿಂದು ಸತ್ತಿರಬಹುದು ಎಂಬ ಅನುಮಾನ ಈಗ ಹುಟ್ಟಿಕೊಂಡಿದೆ.
ಬೇಟೆಯ ವಿಧಗಳು:
ಅರಣ್ಯಗಳಲ್ಲಿ ಪ್ರಾಣಿಗಳನ್ನ ಕೊಲ್ಲಲು ಟ್ರ್ಯಾಪ್, ಜಾಮ್ ಟ್ರ್ಯಾಪ್, ಉರುಳುಗಳು, ಫುಡ್ ಪಾಯಿಸನ್, ಖೆಡ್ಡ ಉರುಳು, ನಾಡ ಬಾಂಬ್ ಹಾಕುವುದು ಜೊತೆಗೆ ಇತ್ತೀಚಿಗೆ ಮಾಂಸದ ಮಧ್ಯೆ ಸಿಡಿಮದ್ದು ಹಾಕಿ ಕೊಲ್ಲುವ ಪ್ರವೃತ್ತಿ ಹೆಚ್ಚಾಗಿದ್ದು, ಪ್ರಾಣಿಗಳ ಚರ್ಮ, ಉಗುರು, ಹಲ್ಲುಗಳು, ಮೂಳೆಗಳು ಜೊತೆಗೆ ಮಾಂಸಕ್ಕಾಗಿ ಕೊಲ್ಲುವ ಪ್ರವೃತ್ತಿ ಹೆಚ್ಚಾಗಿದ್ದು ಪ್ರಿನ್ಸ್ ಹುಲಿ ಸತ್ತ ಜಾಗದಲ್ಲಿ ಕಾಡುಹಂದಿಯನ್ನ ಕೊಲ್ಲಲು ಮಾಂಸಗಳಲ್ಲಿ ಸಿಡಿಮದ್ದು ಹಾಕಿ ಕೊಂದು ಮಾಂಸವನ್ನ ತೆಗೆದುಕೊಂಡು ಹೋಗುವ ಬೇಟೆಗಾರರು ಹೆಚ್ಚಾಗಿದ್ದು, ಇಂತಹ ಕೃತ್ಯಗೆ ಪ್ರೀನ್ಸ್ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ಏಕೆಂದರೆ ಪ್ರಿನ್ಸ್ ಹುಲಿ ಸತ್ತ ರೀತಿ ನೋಡಿದರೆ ಬರಿ ಮುಖ ಹಾಗೂ ತಲೆಯ ಭಾಗ ಸಿಡಿದ ರೀತಿಯಲ್ಲಿ ಇರುವುದು ದೇಹಕ್ಕೆ ಯಾವುದೇ ರೀತಿ ಗಾಯಗಳು ಆಗಿಲ್ಲ. ಆದ್ದರಿಂದ ಪ್ರಿನ್ಸ್ ಸಾವು ಈ ರೀತಿಯ ಹಲವಾರು ಸಂಶಯಗಳಿಗೆ ಕಾರಣವಾಗಿದೆ ಎನ್ನುತ್ತಾರೆ ಹವ್ಯಾಸಿ ಛಾಯಾಗ್ರಾಹಕರು. ಜೊತೆಗೆ ಇತ್ತೀಚಿಗೆ ಅರಣ್ಯಗಳಿಂದ ಮರ ಕಡಿದು ಸಾಗಣಿಕೆ ಮಾಡಲು ಕಷ್ಟವಾಗಿದ್ದು ಇದರಿಂದ ಅರಣ್ಯ ಕಳ್ಳರು ಪ್ರಾಣಿಗಳ ಮಾಂಸ ದಂಧೆಗೆ ಹಿಡಿದಿದ್ದಾರೆ. ಇವರನ್ನ ಹಿಡಿದು ಬಂದಿಸಿದರೆ ಸಾಕ್ಷಿಗಳ ಕೊರತೆಯಿಂದ ಜಾಮೀನನ ಮೇಲೆ ಬಂದು ಅರಣ್ಯಗಳಲ್ಲಿ ಬೆಂಕಿ ಇಡುವುದು ಮುಂತಾದ ಕೆಲಸಗಳನ್ನ ಮಾಡುತ್ತಾರೆ. ಸಿಬ್ಬಂದಿಗಳ ಕೊರತೆಯಿಂದ ನಾವು ಅಸಹಾಯಕರಾಗಿದ್ದೇವೆ ಎನ್ನುತ್ತಾರೆ ಹಿರಿಯ ಅರಣ್ಯಾಧಿಕಾರಿಗಳು.
ಪ್ರವಾಸಿಗರೆ ಇಲ್ಲ:
ಬಂಡೀಪುರ ಅರಣ್ಯ ಪ್ರದೇಶದಲ್ಲಿ ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಪ್ರತಿ ದಿನವೂ ದರ್ಶನ ಕೊಡುತ್ತಿದ್ದ ಪ್ರಿನ್ಸ್ ಹುಲಿ ಸಾವಿನಿಂದ ಈಗ ಈ ಭಾಗದಲ್ಲಿ ಅರಣ್ಯ ಸಫಾರಿಗೆ ಜನರೇ ಇಲ್ಲದಂತಾಗಿದ್ದು ಅರಣ್ಯ ಇಲಾಖೆಯ ವಸತಿಗಳು ಹಾಗೂ ಈ ಭಾಗದಲ್ಲಿ ಇರುವ ಖಾಸಗಿ ರೆಸಾರ್ಟ್ ಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.
ಪ್ರಿನ್ಸ್ ಸಾವಿನ ಸಾವು ಸಹಜ ಸಾವು. ಅದು ಮೃತ ಪಟ್ಟ ನಂತರ ಕಾಡು ಹಂದಿಗಳು ಮುಖವನ್ನ ತಿಂದಿರಬಹುದು ಎನ್ನುತ್ತಾರೆ ಅರಣ್ಯಾಧಿಕಾರಿಗಳು. ಆದರೆ ಹುಲಿಯ ಮಾಂಸ ತುಂಬಾ ವಾಸನೆ ಇರುವುದರಿಂದ ಅದನ್ನ ಪ್ರಾಣಿಗಳು ತಿನ್ನಲು ಸಾಧ್ಯವಿಲ್ಲ. ಜೊತೆಗೆ ಪ್ರೀನ್ಸ್ ಹುಲಿಯ ಮುಖ ಮಾತ್ರ ಸಿಡಿದ ರೀತಿಯಲ್ಲಿ ಇದ್ದು, ಆದರೆ ದೇಹದ ಯಾವ ಭಾಗದಲ್ಲೂ ಏನೂ. ಹುಲಿ ಸಾವಿನ ಬಗ್ಗೆ ಹಲವಾರು ಅನುಮಾನಗಳು ಹುಟ್ಟು ಹಾಕಿದ್ದು, ಸಫಾರಿಗಳ ಮೆಚ್ಚಿನ ಪ್ರಿನ್ಸ್ ಅರಣ್ಯ ಇಲಾಖೆಗೆ ಒಂದು ಹುಲಿ ಮಾತ್ರ. ಆದರೆ ಪ್ರವಾಸಿಗರಿಗೆ ಪ್ರಿನ್ಸ್ ಎಂದೇ ಖ್ಯಾತಿ ಹೊಂದಿದ ಈ ಹುಲಿ ಸಾವು ನ್ಯಾಯವೇ ಎಂಬುದು ಪ್ರಶ್ನೆಯಾಗಿದೆ.