ಮೈಸೂರು: ಉಪಚುನಾವಣೆ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಾಡಿದ ಟ್ವೀಟರ್ ಗೆ ಸಂಸದ ಪ್ರತಾಪ್ ಸಿಂಹ ಖಾರವಾಗಿ ಟ್ವೀಟ್ ಮಾಡಿದ್ದು, ಈಗ ಇಬ್ಬರ ನಡುವೆ ಟ್ವೀಟರ್ ವಾರ್ ಶುರುವಾಗಿದ್ದು ಅದು ವ್ಯಕ್ತಿಗತ ಟೀಕೆಗೆ ಬಂದು ನಿಂತಿದೆ.
ಏಪ್ರಿಲ್ 13 ರಂದು ಉಪಚುನಾವಣಾ ಫಲಿತಾಂಶಕ್ಕೂ ಮೊದಲ ಬೆಳಗ್ಗೆ 7.30ರ ಸಮಯದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಟ್ವೀಟರ್ ನಲ್ಲಿ ಈ ಉಪಚುನಾವಣಾ ಫಲಿತಾಂಶ ಕೆಲವರಿಗೆ ನಮ್ರತೆಯನ್ನ ಕಲಿಸಿದ್ದು, ಮತ್ತೆ ಕೆಲವರಿಗೆ ಕೆಲಸ ಮಾಡದೆ ಬರೀ ಮಾತಿನಿಂದಲೇ ಚುನಾವಣೆ ಗೆಲ್ಲಬಹುದು ಎಂಬ ಪೇಪರ್ ಸಿಂಹಗಳಿಗೆ ಪಾಠ ಕಲಿಸಲಿದೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಖಾರವಾಗಿ ಟ್ವೀಟ್ ಮಾಡಿದ ಪ್ರತಾಪ್ ಸಿಂಹ ನಿಮ್ಮ ಸಾಮಾನ್ಯ ಮಗನ ಭವಿಷ್ಯಕ್ಕೋಸ್ಕರ ನಿಮ್ಮ ತಂದೆ ಸಿಎಂ ಸ್ಥಾನವನ್ನೇ ತ್ಯಾಗ ಮಾಡಿದರು. ಅಲ್ಲದೆ ನಿಮ್ಮ ತಂದೆ ಮೀಸಲು ಕ್ಷೇತ್ರಕ್ಕಾಗಿ ಗುರುಮಿಟ್ಕಲ್ ನಿಂದ ಚಿತ್ತಾಪುರಕ್ಕೆ ಬದಲಾದರು ಎಂದು ಟ್ವೀಟ್ ಮಾಡಿದ ಅವರು ನಾನು ಗೆದ್ದಿರುವುದು ಸಿಎಂ ತವರು ಕ್ಷೇತ್ರದಲ್ಲಿ ಬಿಜೆಪಿಗೆ ಅಷ್ಟೊಂದು ಪ್ರಬಲಬವಾಗಿಲ್ಲದ ಕ್ಷೇತ್ರದಲ್ಲಿ ಗೆದ್ದಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದಕ್ಕೆ ಪುನಹ ಟ್ವೀಟ್ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಸಾಮಾನ್ಯ ಕ್ಷೇತ್ರದಲ್ಲಿ ನಿನ್ನ ವಿರುದ್ದ ಸ್ಪರ್ಧೆ ಮಾಡಲು ಸಿದ್ದನಿದ್ದೇನೆ. ನೀನು ಮಾಡಿರುವ ಕೆಲಸವನ್ನ ಮಾತ್ರ ಜನರಿಗೆ ತಿಳಿಸಬೇಕು. ಅನ್ಯವಶಕವಾಗಿ ಮಾತನಾಡಬಾರದು. ಜನರು ಯಾರು ಗೆಲ್ಲಬೇಕೆಂದು ನಿರ್ಧರಿಸುತ್ತಾರೆ ಅಲ್ಲದೆ ನೀನು ಬಿಜೆಪಿಯಿಂದ ಟಿಕೆಟ್ ಹೇಗೆ ತಂದು ಗೆದ್ದೆ ಎಂದು ಮೈಸೂರು ಜನಿರಿಗೆ ಗೊತ್ತು. ಅಲ್ಲದೆ ಉಪಚುನಾವಣಾ ಸಂಧರ್ಭದಲ್ಲಿ ನಿನ್ನ ಕೀಳು ಮಾತಿನಿಂದ ಎರಡು ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋತ್ತಿದ್ದು ಎಂದು ಚುಚ್ಚು ಮಾತಿನಿಂದ ಮರು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಮರು ಟ್ವೀಟ್ ಮಾಡಿದ ಪ್ರತಾಪ್ ಸಿಂಹ ನಿನ್ನ ವಿರುದ್ದ ಸ್ಪರ್ಧೆ ಮಾಡುವುದಿಲ್ಲ, ನಿನ್ನ ತಂದೆಯ ವಿರುದ್ದ ಸ್ಪರ್ಧೆ ಮಾಡುತ್ತೇನೆ ಏಕೆಂದರೆ ನಿನಗೆ ನಿಮ್ಮ ತಂದೆ ಹೆಸರೇ ನಿನಗೆ ಬಲ. ಆದರೆ ನಾನು ನನ್ನ ಸ್ವಂತ ಬಲದಿಂದ ಪರಿಶ್ರಮದಿಂದ ಮೇಲೆ ಬಂದಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಉಪಚುನಾವಣಾ ಫಲಿತಾಂಶದ ನಂತರ ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಟ್ವೀಟರ್ ನಲ್ಲಿ ವಾರ್ ನಡೆಯುತ್ತಿದೆ. ಸಂಸದ ಪ್ರತಾಪ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಳಿಕ ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಟ್ವಿಟರ್ ಸಮರ ಆರಂಭವಾಗಿದೆ.
ಸಂಸದ ಮತ್ತು ಸಚಿವರು ಪರಸ್ಪರ ಟ್ವಿಟರ್ನಲ್ಲಿ ಕಾಲೆಳೆದುಕೊಳ್ಳುತ್ತಿರುವುದು ಈಗ ವೈರಲ್ ಆಗಿದೆ. ಇವರಿಬ್ಬರೂ ಉಪಚುನಾವಣೆ ಫಲಿತಾಂಶ ಕುರಿತು ಟ್ವಿಟರ್ ನಲ್ಲೆ ವಾದ ಪ್ರತಿವಾದ ನಡೆಸುತ್ತಿದ್ದಾರೆ. ಸಂಸದ ಪ್ರತಾಪ್ಸಿಂಹರನ್ನು ಪೇಪರ್ ಸಿಂಹ ಎಂದು ಸಚಿವ ಪ್ರಿಯಾಂಕ್ ಖರ್ಗೆ ಉಲ್ಲೇಖಿಸಿದ್ದಾರೆ. ಮೀಸಲು ಕ್ಷೇತ್ರ ಬಿಟ್ಟು ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಪ್ರಿಯಾಂಕ್ ಖರ್ಗೆಗೆ ಸಚಿವ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ. ಸಚಿವರು ಪ್ರತಾಪ್ ಸಿಂಹ ಸವಾಲನ್ನು ಟ್ವಿಟರ್ನಲ್ಲೆ ಸ್ವೀಕರಿಸಿದ್ದಾರಲ್ಲದೇ, ಬೇಕಿದ್ದರೆ ನಿಮ್ಮ ಎದುರಲ್ಲೆ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಸವಾಲೆಸೆದಿದ್ದಾರೆ. ಅದಕ್ಕೆ ಸಂಸದರು ನಿಮ್ಮ ತಂದೆಯೇ ನನ್ನ ವಿರುದ್ದ ಸ್ಪರ್ಧಿಸಲಿ ಎಂದು ಮರು ಸವಾಲು ಹಾಕಿದ್ದಾರೆ. ನೀವು ನಿಮ್ಮ ಮೀಸಲು ಕ್ಷೇತ್ರವನ್ನೇ ಕಳೆದುಕೊಳ್ಳಬೇಕಾದಿತು ಹುಷಾರ್ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಬಳಿ ಸಾಕಾ ಇನ್ನು ಬೇಕಾ ಎಂದು ಸಂಸದರು ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ. ಪರಸ್ಪರ ವೈಯುಕ್ತಿಕ ಟೀಕೆ ಟಿಪ್ಪಣಿ ಸಚಿವ, ಸಂಸದರಿಂದಲೂ ಬಂದಿದೆ. ನೀವು ಟಿಕೇಟ್ ಹೇಗೆ ಪಡೆದಿದ್ದೀರಿ ಎಂದು ನನಗೆ ಗೊತ್ತು ಅಂತ ಪ್ರತಾಪ್ಸಿಂಹರನ್ನು ಸಚಿವ ಖರ್ಗೆ ಕೆಣಕಿದ್ದಾರೆ. ಅದಕ್ಕೆ ಪ್ರತಿಯಾಗಿ ನಿಮ್ಮ ಬಂಡವಾಳವು ನನಗೆ ಗೊತ್ತಿಗೆ ಎಂದು ಪ್ರತಾಪ್ಸಿಂಹ ಉತ್ತರಿಸಿದ್ದಾರೆ. ಕೊನೆಯಲ್ಲಿ ಸಂವಿಧಾನದ ಕುರಿತ ತಮ್ಮ ಲೇಖನಗಳನ್ನು ಲಿಂಕ್ ಮಾಡಿ ಎಲ್ಲಿ ಯಾವಾಗ ಬೇಕಾದರೂ ಚರ್ಚೆಗೆ ಬನ್ನಿ ಎಂದು ಪ್ರತಾಪ್ಸಿಂಹ ತಿಳಿಸಿದ್ದಾರೆ. ಇಬ್ಬರ ಟ್ವಿಟರ್ಗಳನ್ನು ಕಂಡು ಇತರ ಟ್ವೀಟರ್ ಬಳಕೆದಾರರು ರೀ ಟ್ವೀಟ್ ಮಾಡುತ್ತಿದ್ದಾರೆ.
ಟ್ವೀಟರ್ ವೀಕ್ಷಿಸಿದ ಹಲವರು ಇವರಿಗೆ ಮಾಡುವುದಕ್ಕೆ ಬೇರೆ ಕೆಲಸವೇನೂ ಇಲ್ಲವಾ? ಈ ರೀತಿ ಕಿತ್ತಾಡುವ ಬದಲು ಏನಾದರೂ ಕಾರ್ಯನಿರ್ವಹಿಸಿ ತೋರಿಸಬಹುದಿತ್ತು ಎಂದಿದ್ದಾರೆ.