ಮೈಸೂರು: ಚಲಿಸುವ ರೈಲಿನ್ನ ಹತ್ತಲು ಪ್ರಯತ್ನಿಸಿ ಆಯ ತಪ್ಪಿ ರೈಲಿನ ಚಕ್ರಕ್ಕೆ ಸಿಲುಕಿ ಎಡಗಾಲು ಕತ್ತರಿಸಿಕೊಂಡ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿಯನ್ನ ರೈಲ್ವೆ ಪೊಲೀಸ್ ಪೇದೆಯೊಬ್ಬ ಏಕಾಂಗಿಯಾಗಿ ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಏಪ್ರಿಲ್ 11ರ ಸಂಜೆ 4.15ರ ಸಮಯದಲ್ಲಿ ಮದ್ದೂರು ರೈಲ್ವೆ ನಿಲ್ದಾಣದಲ್ಲಿ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಪ್ಯಾಸೆಂಜರ್ ಎಕ್ಸೆಪ್ರೆಸ್ ರೈಲನ್ನ ಚಲಿಸುವಾಗಲೇ ಕುಡಿದ ಅಮಲಿನಲ್ಲಿ ಮೇಲೆ ಹತ್ತಲು ಯತ್ನಿಸಿ ಆಯತಪ್ಪಿ ಕೆಳಗೆಬಿದ್ದು ರೈಲಿನ ಚಕ್ರಕ್ಕೆ ಕಾಲು ಸಿಲುಕಿ ಎಡಗಾಲು ತುಂಡಾಗಿ ರಕ್ತದ ಮಡುವಿನಲ್ಲಿ ಬಿದ್ದು ಸುಮಾರು 15 ನಿಮಿಷಗಳ ಕಾಲ ಒದ್ದಾಡುತ್ತಿದ್ದ ಆಂಧ್ರಪ್ರದೇಶ ಗುಂಟೂರಿನ ಕಿಶೋರ್ ಎಂಬಾತ ಕೂಲಿ ಕೆಲಸಕ್ಕಾಗಿ ಕರ್ನಾಟಕಕ್ಕೆ ಬಂದು ಮದ್ದೂರಿನಿಂದ ಬೆಂಗಳೂರಿಗೆ ಹೋಗುತ್ತಿರುವಾಗ ಈ ಘಟನೆ ನಡೆದಿದೆ.
ತಕ್ಷಣ ಸುದ್ದಿ ತಿಳಿದ ರೈಲ್ವೆ ಪೊಲೀಸ್ ಪೇದೆ ಬಿರೇಶ ಘಟನಾ ಸ್ಥಳಕ್ಕೆ ಬಂದು ಆ್ಯಂಬುಲೆನ್ಸ್ ಗೆ ಫೋನ್ ಮಾಡಿದ್ದಾನೆ. ಆದರೆ ಆ್ಯಂಬುಲೆನ್ಸ್ ಬೇರೆ ಕಡೆ ಹೋಗಿದ್ದ ಕಾರಣ ಸ್ಥಳಕ್ಕೆ ಬರಲು ಅರ್ಧ ಗಂಟೆ ಆಗುತ್ತದೆ ಎಂದು ತಿಳಿದು, ರೈಲ್ವೆ ನಿಲ್ದಾಣದಿಂದ ಸ್ಟ್ರೆಚೆರ್ ತೆಗೆದುಕೊಂಡು ರಸ್ತೆಗೆ ಬಂದು ಆಟೋದಲ್ಲಿ ಆತನನ್ನ ಮದ್ದೂರಿನ ಸರ್ಕಾರಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಆತನೊಂದಿಗೆ ಮಂಡ್ಯದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಅಲ್ಲಿ ಒಂದು ಬಾಟಲ್ ರಕ್ತ ಕೊಡಿಸಿದ್ದು, ರೈಲ್ವೆ ಹಳ್ಳಿಯ ಮೇಲೆ ಬಿದಿದ್ದ ತುಂಡಾದ ಕಾಲನ್ನ ಬಾಕ್ಸ್ ನಲ್ಲಿ ಹಾಕಿಕೊಂಡು ಇಬ್ಬರು ಪೇದೆಗಳು ಮಂಡ್ಯ ಆಸ್ಪತ್ರೆಗೆ ಬಂದು ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನ ಆ್ಯಂಬುಲೆನ್ಸ್ ನಲ್ಲಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಾಸಿದ್ದಾರೆ. ಘಟನೆಯಾದ ಸಮಯದಿಂದ ರಾತ್ರಿ ಒಂದು ಘಂಟೆಯರೆಗೂ ಆತನೊಂದಿಗೆ ಇದ್ದು, ಆತನ ಚಿಕಿತ್ಸೆಗೆ ಸಹಾಯ ಮಾಡಿ ಪೊಲೀಸ್ ಪೇದೆ ಬಿರೇಶ ಮಾನವೀಯತೆ ಮೆರೆದಿದ್ದಾರೆ.
ಮೊಬೈಲ್ ನಲ್ಲಿ ವಿಡಿಯೋ ತೆಗೆಯುತ್ತಿದ್ದ ಸಾರ್ವಜನಿಕರು:
ಕಾಲು ಕಳೆದುಕೊಂಡು ಒದ್ದಾಡುತ್ತಿದ್ದ ಕಿಶೋರನಿಗೆ ನೆರವು ನೀಡವ ಬದಲು ಸಾರ್ವಜನಿಕರು ತಮ್ಮ ಮೊಬೈಲ್ ಗಳಲ್ಲಿ ವಿಡಿಯೋ ಪೋಟೋ ತೆಗೆಯುತ್ತಿದ್ದು ಸಹಾಯಕ್ಕಾಗಿ ಅಂಗಲಾಚಿದರೂಯಾರು ಸಹಾಯ ಮಾಡಲು ಮುಂದೆ ಬರುತ್ತಿರಲಿಲ್ಲ. ಕೊನೆಗೆ ಪೊಲೀಸ್ ಪೇದೆ ಬಂದ ನಂತರವೂ ಆತನಿಗೂ ಸಹಾಯ ಮಾಡಲು ಹಿಂದೆ ಮುಂದೆ ನೋಡುತ್ತಿದ್ದರು.
ಕಾಲು ಕಳೆದಕೊಂಡ ಕಿಶೋರ್ ಸದ್ಯೆ ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತುಂಡಾಗಿರುವ ಕಾಲನ್ನ ಮರು ಜೋಡಣೆಗೆ ಸಾಧ್ಯವಿಲ್ಲ ಎಂದ ವೈದ್ಯರು ಆತನಿಗೆ ಚಿಕಿತ್ಸೆ ನೀಡುತ್ತಿದ್ದು, ತೀವ್ರ ರಕ್ತಸ್ರಾವ ಆದ ಹಿನ್ನಲ್ಲೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಿದ್ದಾರೆ.