ಮೈಸೂರು: ಕ್ರಿಕೆಟ್ ಬಾಲ್ ತರಲು ಶಾಲೆಯ ಕಾಪೌಂಡ್ ಮೂಲಕ ಆರ್ ಸಿಸಿಗೆ ಹತ್ತುವಾಗ ಬಾಲಕ ಆಯತಪ್ಪಿ ಕೆಳಗೆ ಬಿದ್ದು ತೀವ್ರ ಗಾಯಗೊಂಡ ಘಟನೆ ನಗರದ ಪಡುವಾರಹಳ್ಳಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಗಾಯಗೊಂಡ ಬಾಲಕ ಅರುಣ್(13). ಶಾಲೆಗೆ ಬೇಸಿಗೆ ರಜೆಯಿದ್ದ ಕಾರಣ ತನ್ನ ಸ್ನೇಹಿತರೊಂದಿಗೆ ಪಡುವಾರಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿ ಕ್ರಿಕೆಟ್ ಆಡುತಿದ್ದಾಗ ಬಾಲ್ ಶಾಲೆಯ ಆರ್ ಸಿಸಿ ಮೇಲೆ ಬಿದಿದೆ. ಆರ್ ಸಿಸಿ ಮೇಲೆತಲ್ಲು ಮೆಟ್ಟಿಲುಗಳೂ ಇಲ್ಲದ ಕಾರಣ ಕಾಪೌಂಡ್ ಮೇಲಿಂದ ಆರ್ ಸಿಸಿಗೆ ಹತ್ತಲು ಪ್ರಯತ್ನಿಸಿದಾಗ ಆಯತಪ್ಪಿ ಬಾಲಕ ಕೆಳಗೆ ಬಿದಿದ್ದಾನೆ ಎನ್ನಲಾಗಿದೆ. ಕೂಡಲೇ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.