ಮೈಸೂರು: ಮೈಸೂರಿನ ಆರ್ ಬಿಐ ಕಟ್ಟಡದ ಹಿಂಭಾಗದ ಜಮೀನಿನಲ್ಲಿ ಭೂಮಿಯೊಳಗೆ ಕಾಣಿಸಿಕೊಂಡ ಬೆಂಕಿಯ ಹಿನ್ನಲ್ಲೆಯಲ್ಲಿ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿ ಪರೀಶೀಲನೆ ನಡೆಸುತ್ತಿದ್ದಾರೆ.
ಕಳೆದ ಶುಕ್ರವಾರ ಭಯಲು ಬಹಿರ್ದೇಶೆಗೆಂದು ಮೂರು ಜನ ಬಾಲಕರು ಆರ್ ಬಿಐ ಹಿಂಭಾಗದಲ್ಲಿರುವ ಖಾಸಗಿ ವ್ಯಕ್ತಿಗೆ ಸೇರಿದ ಜಮೀನಿಗೆ ಬಂದಿದ್ದು ಬಹಿರ್ದೇಶೆ ಮಾಡುವಾಗ ಬಾಲಕನಿಗ ಆ ಸ್ಥಳದಲ್ಲಿ ಕಾಲಿಟ್ಟ ತಕ್ಷಣ ಮರಳು ರೀತಿಯ ಮಣ್ಣಿನಲ್ಲಿ ಹೂತ್ತು ಬೆಂಕಿಯಲ್ಲಿ ಸುಟ್ಟ ಗಾಯಗಳಾಗಿದ್ದು ತಕ್ಷಣ ಆತನನ್ನ ರಕ್ಷಿಸಲು ಆಗಮಿಸಿದ ಮತ್ತೊಬ್ಬ ಬಾಲಕನಿಗೆ ಸುಟ್ಟ ಗಾಯಗಳಾಗಿದ್ದು, ಕೂಡಲೇ ಇಬ್ಬರು ಆಸ್ಪತ್ರೆಗ ಸಾಗಿಸಲಾಗಿದ್ದು, ಅದರಲ್ಲಿ ಹರ್ಷಲ್ ಎಂಬ ಬಾಲಕ ನಿನ್ನೆ ಮಧ್ಯಾಹ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವ್ನಪ್ಪಿದ್ದಾನೆ. ಇದರಿಂದ ಗಾಬರಿಯಾದ ಕುಟುಂಬದವರು ಈ ವಿಚಾರವನ್ನ ಪೊಲೀಸರಿಗೆ ತಿಳಿಸಿದಾಗ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರೀಶಿಲನೆ ನಡೆಸಿ ಆ ಸ್ಥಳದ ಸುತ್ತ ಪಟ್ಟಿಹಾಕಿ ಸಾರ್ವಜನಿಕರು ಯಾರು ಪ್ರವೇಶಿಸಿದಂತೆ ನಿರ್ಬಂಧ ವಿಧಿಸಿದ್ದಾರೆ.
ಗಣಿ ಭೂವಿಜ್ಞಾನ ಹಿರಿಯ ಅಧಿಕಾರಿಗಳು ಆಗಮನ:
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೈಸೂರಿನ ಹಿರಿಯ ಭೂ ವಿಜ್ಞಾನಿಗಳ ತಂಡ ಆಗಮಿಸಿದ್ದು ಸ್ಥಳವನ್ನ ಪರಿಶೀಲನೆ ನಡೆಸಿದ್ದು ಇದೊಂದು ಪ್ರಕೃತಿಯ ವಿಸ್ಮಯವೋ ಅಥವಾ ಕಾರ್ಖಾನೆಗಳ ರಾಸಾಯನಿಕ ಪದಾರ್ಥಗಳ ವಿಲೇವಾರಿಯಿಂದ ಈ ಸ್ಥಳದಲ್ಲಿ ಆಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಹೆಚ್ಚಿನ ತನಿಖೆಗಾಗಿ ಬೆಂಗಳೂರಿನಿಂದ ಹಿರಿಯ ವಿಜ್ಞಾನಿಗಳು ಆಗಮಿಸುತ್ತಿದ್ದಾರೆ ಎಂದು ಮೈಸೂರಿನ ಭೂ ವಿಜ್ಞಾನಿ ನಿಂಗರಾಜ್ ತಿಳಿಸಿದ್ದಾರೆ.
ಖಾಸಗಿ ವ್ಯಕ್ತಿಗಳಿಗೆ ಸೇರಿದ ಈ ಜಮೀನಿನ ಹಳ್ಳದ ರೀತಿಯ ಸ್ಥಳದಲ್ಲಿ ಸ್ಥಳದ ಸ್ವಲ್ಪ ಭಾಗದಲ್ಲಿ ಈ ರೀತಿ ಬೆಂಕಿ ಮೇಲೆ ಬರುತ್ತಿರುವ ವಿಚಾರ ತಿಳಿದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದು ಜನರನ್ನ ನಿಯಂತ್ರಿಸಲು ಹೆಚ್ಚಿನ ಪೊಲೀಸರನ್ನ ನಿಯೋಜನೆ ಮಾಡಲಾಗಿದ್ದು, ಬೆಂಕಿ ಬರುತ್ತಿದ್ದ ಜಾಗಕ್ಕೆ ಮಣ್ಣು ಮತ್ತು ನೀರನ್ನ ಹಾಕಿ ಮುಚ್ಚಿದ್ದು ಇದೊಂದು ಕಾರ್ಖಾನೆಯವರು ತ್ಯಾಜ್ಯ ವಿಸರ್ಜನೆಯಿಂದಯಾಗಿದ್ದು ಇದು ಐದಾರು ವರ್ಷಗಳ ಹಿಂದೆ ನಡೆದಿರಬಹುದು ಎನ್ನುತ್ತಾರೆ ಸ್ಥಳೀಯರು.