News Kannada
Tuesday, September 27 2022

ಮೈಸೂರು

ಭೂಮಿಯಲ್ಲಿ ಬೆಂಕಿ ಜ್ವಾಲೆ ಪ್ರಕರಣ: ಸಾಯುವ ಮುನ್ನ ಹರ್ಷಲ್ ಹೇಳಿದ್ದೇನು? - 1 min read

Photo Credit :

ಭೂಮಿಯಲ್ಲಿ ಬೆಂಕಿ ಜ್ವಾಲೆ ಪ್ರಕರಣ: ಸಾಯುವ ಮುನ್ನ ಹರ್ಷಲ್ ಹೇಳಿದ್ದೇನು?

ಮೈಸೂರು: ಭೂಮಿಯಲ್ಲಿ ಬೆಂಕಿಯ ಜ್ವಾಲೆಗೆ ಸಿಲುಕಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ ಬಾಲಕ ಸಾಯುವ ಮುನ್ನ ಘಟನೆಯ ಬಗ್ಗೆ ವಿವರಿಸಿದ್ದು ಹೀಗಿದೆ…

ನಗರದ ಹೊರವಲಯದ ಆರ್ ಬಿಐಗೆ ಕಟ್ಟಡದ ಹಿಂಭಾಗದ ಶಾದನಹಳ್ಳಿ ಖಾಸಗಿ ಅವರಿಗೆ ಸೇರಿದ ಜಮೀನಿನಲ್ಲಿ ಬಹಿರ್ಧೇಸಿಗೆಂದು ಹೋದ ಬಾಲಕ ಭೂಮಿಯ ಬೆಂಕಿಯ ಜ್ವಾಲೆಗೆ ಸಿಲುಕಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವ್ನಪ್ಪಿದ ಹರ್ಷಲ್ ಸಾಯುವ ಮುನ್ನ ಆಸ್ಪತ್ರೆಯಲ್ಲಿ ವಿಭಿನ್ನ ಹೇಳಿಕೆ ನೀಡಿದ್ದು ಈಗ ಹಲವಾರು ಸಂಶಯಗಳಿಗೆ ಕಾರಣವಾಗಿದೆ.

ಹರ್ಷಲ್ ಹೇಳಿಕೆ:
ಸುಟ್ಟ ಗಾಯಗಳಿಂದ ಸಿಕಿತ್ಸೆಗಾಗಿ ನಗರದ ಕೆ.ಆರ್ ಆಸ್ಪತ್ರೆ ದಾಖಲಾಗಿದ್ದ ಹರ್ಷಲ್ ಅಲ್ಲಿ ಸಾಯುವ ಮಾತನಾಡಿ, ನಾವು ಆರು ಜನ ಕ್ರಿಕೆಟ್ ಆಡುತ್ತಿದ್ದು, ಬಾಲ್ ಹಳ್ಳಕ್ಕೆ ಬಿದಿತ್ತು. ಅದನ್ನ ತರಲು ಸ್ನೇಹಿತ ಮನೋಜ್ ಹೋಗಿದ್ದು ಅವನ ಹಿಂದೆ ನಾನು ಹೋದೆ. ಆತ ಬಾಲ್ ತರುವಾಗ ಜಾರಿಬಿದ್ದ. ಆತ ಜೋರಾಗಿ ಕಿರುಚಿದ್ದು ತಕ್ಷಣ ನಾನು ಆತನನ್ನ ಹಿಡಿದು ಎಳೆಯಲು ಹೋದಾಗ ಕಾಲು ಜಾರಿ ಬಿದ್ದೆ. ಆ ನಂತರ ನನ್ನ ಕೈ ಮತ್ತು ಕಾಲುಗಳು ಬೆಂಕಿಯಲ್ಲಿ ಸುಟ್ಟ ರೀತಿ ಗಾಯಗಳಾದವು. ತಕ್ಷಣ ಯಾರೂ ಅಲ್ಲೇ ಇದ್ದ ದಾರಿಹೋಕರು ನನ್ನನ್ನ ಆಸ್ಪತ್ರೆಗೆ ಸೇರಿಸಿದರು ಎಂದು ಹೇಳಿಕೆ ನೀಡಿದ್ದಾನೆ.

ಆದರೆ ಪೊಲೀಸರಿಗೆ ಈತನ ಸ್ನೇಹಿತರು ನಾವು ಮೂರು ಜನ ಬಹಿರ್ಧೇಸೆಗೆ ಹೋಗಿದ್ದಾಗ ಈ ರೀತಿ ಘಟನೆ ನಡೆಯಿತು ಎಂದು ಹೇಳಿಕೆ ನೀಡಿದ್ದು, ಈಗ ಗೊಂದಲಕ್ಕೆ ಕಾರಣವಾಗಿದೆ.

See also  ಗುಪ್ತವಾಗಿ ನಡೆದ ಸಿಎಂ ಫಾರಂ ಹೌಸ್ ನ ಗೃಹಪ್ರವೇಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು