News Kannada
Tuesday, September 27 2022

ಮೈಸೂರು

ಕಾಂಗ್ರೆಸ್ ಜೊತೆಗಿನ ಮೈತ್ರಿ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ: ಹೆಚ್.ಡಿ.ದೇವೇಗೌಡ - 1 min read

Photo Credit :

ಕಾಂಗ್ರೆಸ್ ಜೊತೆಗಿನ ಮೈತ್ರಿ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ: ಹೆಚ್.ಡಿ.ದೇವೇಗೌಡ

ಮೈಸೂರು: ಕಾಂಗ್ರೆಸ್ ಜೊತೆಗಿನ ಮೈತ್ರಿ ಯಾವುದೇ ಕಾರಣಕ್ಕೂ ಸಾಧ್ಯ ಇಲ್ಲ. 224 ಕ್ಷೇತ್ರದಲ್ಲಿಯೂ ನಮ್ಮ ಅಭ್ಯರ್ಥಿಗಳು ಇರುತ್ತಾರೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೈ ಶತಾಯಗತಾಯ ಪಕ್ಷ ಬಲವರ್ಧನೆಗೆ ಮುಂದಾಗಿದೆ. ಮೋದಿಯವರು ಕೂಡ ನವಭಾರತದ ಸೃಷ್ಟಿಯನ್ನು ಕರ್ನಾಟಕದಿಂದ ಮಾಡುತ್ತೇನೆ. ಆರು ಬೃಹತ್ ಕಾರ್ಯಕ್ರಮ ಆಯೋಜನೆ ಮಾಡುತ್ತೇವೆ ಎಂದಿದ್ದಾರೆ. ಎರಡು ರಾಷ್ಟ್ರೀಯ ಶಕ್ತಿಗಳು ಹಣಕಾಸಿನ ಮೂಲಕ ಚುನಾವಣೆಗೆ ಬರುತ್ತಿವೆ. ನಮ್ಮನ್ನು ಗಾಳಿಗೆ ತೂರಲು ಯತ್ನಿಸುತ್ತಿವೆ. ಈ ನಡುವೆ ನಾವು ಹೋರಾಟ ಮಾಡುತ್ತೇವೆ. ನಮ್ಮ ಕಾಲದ ಅಭಿವೃದ್ಧಿ ಕೆಲಸ ಜನರಿಗೆ ಗೊತ್ತಿದೆ. ಕುಮಾರಸ್ವಾಮಿಯವರು ಇರುವಾಗ ರೈತರ ಸಾಲ ಮನ್ನಾ, ಗ್ರಾಮ ವಾಸ್ತವ್ಯದ ವಿನೂತನ ಕಾರ್ಯಕ್ರಮ ಆಯೋಜಿಸಿದ್ದರು.  

ಏಡ್ಸ್ ಹೊಂದಿದ ಮಗುವನ್ನು ಎತ್ತಿಕೊಂಡು ಊಟ ಮಾಡಿಸಿದ್ದರು. ಸುವರ್ಣ ಗ್ರಾಮದ ಪರಿಕಲ್ಪನೆ, ಬೆಂಗಳೂರು ಅಭಿವೃದ್ಧಿಗೆ ಪೂರಕ. ಇವುಗಳನ್ನೇಲ್ಲಾ ಮಾಡಿದ್ದು ಜೆಡಿಎಸ್ ಅಧಿಕಾರದಲ್ಲಿದ್ದ ಕಾಲದಲ್ಲಿ ಎಂದರು. ಹೆಚ್.ಡಿ.ಕುಮಾರಸ್ವಾಮಿಯವರ ಹೆಸರು ಎಲ್ಲರ ಮನಸ್ಸಲ್ಲಿ ಹಚ್ಚ ಹಸಿರಾಗಿದೆ. ಪ್ರಾಂತೀಯ ಪಕ್ಷ ಇರಬೇಕೆಂಬ ಅರಿವು ಜನರಿಗೆ ಬಂದಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಗಮನ ಹರಿಸಿರುವುದೇ ಇದಕ್ಕೆ ಕಾರಣ. ಕುಮಾರಸ್ವಾಮಿಯವರು ನದಿಗಳ ಬಗ್ಗೆ ಅರಿವಿರುವ ನಾಯಕರಾಗಿದ್ದು, ಹೋರಾಟ ಮಾಡುವ ಸ್ಥೈರ್ಯ ಅವರಿಗಿದೆ ಎಂದರು.

ಬಿ.ಎಸ್.ಯಡಿಯೂರಪ್ಪನವರು ದುಡ್ಡು ತಗೊಂಡು ಚುನಾವಣೆಯಲ್ಲಿ ಮೈತ್ರಿ ಅಂತ ಆರೋಪ ಮಾಡಿದ್ದಾರೆ. ಅವರಿಂದ ನಾನೂ ರಾಜಕೀಯ ಮೌಲ್ಯ ತಿಳಿಯಬೇಕಿಲ್ಲ. ಅವರಿಗೆ ಉತ್ತರ ಕೊಡುವ ಅವಶ್ಯಕತೆಯೂ ಇಲ್ಲ. ನಾನೂ ವಿಶ್ವನಾಥ್ ಅವರ ಜೊತೆ ಮಾತನಾಡಿಲ್ಲ. ಅವರು ನನ್ನ ಜೊತೆ ಮಾತನಾಡಿಲ್ಲ. ಈ ಭಾಗದಲ್ಲಿ ಅವರು ಶಕ್ತಿಶಾಲಿ ನಾಯಕ. ಇದನ್ನ ಅಲ್ಲಗೆಳೆಯೋಕೆ ಸಾಧ್ಯವೇ ಇಲ್ಲ. ಅಂತಹ ಸಂದರ್ಭ ಬಂದರೆ ಕೂತು ಮಾತುಕತೆ ನಡೆಸುತ್ತೇವೆ. ಎರಡು ರಾಷ್ಟ್ರೀಯ ಪಕ್ಷ ಹೇಗೆ ನಡೆದುಕೊಂಡಿವೆ ಎನ್ನುವುದು ಗೊತ್ತಿದೆ.

ಇದರಿಂದ ನಮಗೆ ಸಾಕಷ್ಟು ಪೆಟ್ಟು ಬಿದ್ದಿದೆ ಎಂದರು. ಇನ್ನೂ ಬರಗಾಲ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಆ ಬಗ್ಗೆ ನಾನೂ ಏನೂ ಹೇಳುವುದಿಲ್ಲ ಎಂದರು. ಮೊದಲ ಪಟ್ಟಿ ಬಿಡುಗಡೆಗೆ ಕೋರ್ ಕಮಿಟಿಯಲ್ಲಿ ಸಭೆ ಆಗಬೇಕಿದೆ. ಸಿಎಂ ಸಿದ್ದರಾಮಯ್ಯನವರು ಆರು ತಿಂಗಳು ಮುಂಚಿತವಾಗಿ ಬಿಡುಗಡೆ ಅಂದಿದ್ದಾರೆ. ನಾವು ಪಟ್ಟಿ ಬಿಡುಗಡೆ ಮಾಡಿದ ಮೇಲೆ ಬದಲಾವಣೆ ಮಾಡುವುದಿಲ್ಲ ಎಂದು ತಿಳಿಸಿದರು.

ಕಾಲು ನೋವಿಗಾಗಿ ಆಯುರ್ವೇದ ಚಿಕಿತ್ಸೆ ಪಡೆಯಲಿದ್ದು, ಏಳು ದಿನಗಳು ಚಿಕಿತ್ಸೆ ನಡೆಯಲಿದೆ. ಇನ್ನೂ ಎರಡು ದಿನ ಮೈಸೂರಿನಲ್ಲಿ ಇರುತ್ತೇನೆ. ನಮ್ಮ ಸಂಬಂಧಿಯೋರ್ವರು ಅಮೇರಿಕಕ್ಕೆ ತೆರಳಲಿದ್ದು ಅವರನ್ನು ಭೇಟಿ ಮಾಡಿ ಅವರ ಜೊತೆ ಮಾತುಕತೆ ನಡೆಸಲಿದ್ದೇನೆ ಎದರು. ಈ ಸಂದರ್ಭ ಜೆ.ಡಿ.ಎಸ್ ಕಾರ್ಯಕರ್ತರು ಅವರ ಜೊತೆಗಿದ್ದರು.

See also  ಟಿಪ್ಪು ಜಯಂತಿ ಹಿನ್ನೆಲೆ: ಪೊಲೀಸರಿಂದ ಪಥ ಸಂಚಲನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು