ಮೈಸೂರು: ಮೇಜರ್ ಗೌರವ್ ಆರ್ಯ ವಿರುದ್ದ ಶಿಸ್ತು ಕ್ರಮ ಕೈಗೊಂಡರೆ ರಾಷ್ಟ್ರದ್ಯಾಂತ ರಾಷ್ಟ್ರೀಯ ಆಂದೋಲವನ್ನ ಪ್ರಾರಂಭಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಮ್ಮ ಟ್ವಟೀರ್ ನಲ್ಲಿ ಮೇಜರ್ ಕ್ರಮವನ್ನ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.
ಏನಿದು ಘಟನೆ?
ಜಮ್ಮು-ಕಾಶ್ಮೀರದಲ್ಲಿ ಸೇನೆಯ ಮೇಲೆ ಕಲ್ಲೂ ತೂರಾಟ ನಡೆಸುತ್ತಿದ್ದು ಯುವಕನೊಬ್ಬನನ್ನ ಸೇನಾ ಮೇಜರ್ ಗೌರವ್ ಆರ್ಯ ಸೇನಾಯ ಜೀಪ್ ನ ಮುಂಭಾಗದಲ್ಲಿ ಹಗ್ಗದಿಂದ ಕಟ್ಟಿ ಜೀಪ್ ನ ಮುಂಭಾಗದ ಟೈರ್ ಹಾಕಿ ಅದರ ಮೇಲೆ ಕೂರಿಸಿ ಕರೆದುಕೊಂಡು ಹೋಗಿದ್ದರು. ಈ ವಿಡಿಯೋ ಸಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು ಈ ಸಂಬಂದ ಜಮ್ಮು-ಕಾಶ್ಮೀರದ ಸ್ಥಳೀಯ ಪೊಲೀಸರು ಮೇಜರ್ ವಿರುದ್ದ ಎಫ್ ಐಆರ್ ದಾಖಲಿಸಿದರು.
ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ತಮ್ಮ ಟ್ವೀಟರ್ ನಲ್ಲಿ ಮೇಜರ್ ಕ್ರಮವನ್ನ ಸ್ವಾಗತಿಸಿ, ಮುಂದಿನ ಬಾರಿ ಇಂತಹ ರಾಷ್ಟ್ರ ವಿರೋಧಿಗಳಿಗೆ ಹಿಂದೆ ಮುಂದೆ ಕಲ್ಲಿನ ಕಟ್ಟಿ ಎಳೆದುಕೊಂಡು ಹೋಗಿ. ರಾಷ್ಟ್ರ ನಿಮ್ಮ ಜೊತೆ ಇರುತ್ತದೆ. ನಿಮ್ಮ ವಿರುದ್ದ ದಾಖಲಾಗಿರುವ ಎಫ್ ಐಆರ್ ಗೆ ಏನಾದರೂ ಕ್ರಮಕೈಗೊಂಡರೆ ರಾಷ್ಟ್ರದ್ಯಂತ ರಾಷ್ಟ್ರೀಯಾ ಆಂದೋಲನ ಪ್ರಾರಂಭಿಸಲಾಗುವುದು ಎಂದು ಸಂಸದರು ಟ್ವೀಟರ್ ಮೂಲಕ ಮೇಜರ್ ಗೆ ಬೆಂಬಲ ಸೂಚಿಸಿದ್ದಾರೆ.