News Kannada
Monday, October 03 2022

ಮೈಸೂರು

ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಕಾಮುಕನಿಗೆ ಏಳು ವರ್ಷ ಜೈಲು - 1 min read

Photo Credit :

ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಕಾಮುಕನಿಗೆ ಏಳು ವರ್ಷ ಜೈಲು

ಮೈಸೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕನಿಗೆ 7 ವರ್ಷ ಜೈಲು, ಸಹಕರಿದವನಿಗೆ 2 ವರ್ಷ ಜೈಲು ಹಾಗೂ ಸುಳ್ಳು ಸಾಕ್ಷಿ ನುಡಿದಿದ್ದ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿಯ  ಮೇಲೆ ದೂರು ದಾಖಲಿಸುವಂತೆ ನಗರದ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

2012ರ ಮಾರ್ಚ್ 9ರಂದು ಬಯಲು ಬಹಿರ್ದೆಸೆಗೆ ಹೋಗಿದ್ದ 16 ವರ್ಷದ ಬಾಲಕಿಯನ್ನ ಮಂಡನಹಳ್ಳಿ ಗ್ರಾಮದ ಮಹದೇವಸ್ವಾಮಿ ಎಂಬಾತ ಬೈಕ್ ನಲ್ಲಿ ಅಪಹರಿಸಿ ಅತ್ಯಾಚಾರವೆಸಗಿದನು. ಇವನಿಗೆ ಅದೇ ಗ್ರಾಮದ ಲಿಂಗಣ್ಣಸ್ವಾಮಿ ಎಂಬಾತ ಸಹಾಯ ಮಾಡಿದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಪುರ ಪೊಲೀಸರು ಮೊಕ್ಕದಮ್ಮೆ ದಾಖಲಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಸಿದರು.

ವಿಚಾರಣೆ ನಡೆಸಿದ ನಗರದ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಮಹದೇವಸ್ವಾಮಿಗೆ 7 ವರ್ಷ ಕಠಿಣ ಶಿಕ್ಷೆ, 60 ಸಾವಿರ ದಂಡ ವಿಧಿಸಿದ್ದು, ಇವನಿಗೆ ಸಹಾಯ ಮಾಡಿದ ಲಿಂಗಣಸ್ವಾಮಿಗೆ 2 ವರ್ಷ ಜೈಲು, 10 ಸಾವಿರ ದಂಡ ವಿಧಿಸಿದ್ದಾರೆ. ವಸೂಲಿಯಾಗುವ ದಂಡದ ಹಣದಲ್ಲಿ ಶೇ 70 ರಷ್ಟು ಹಣವನ್ನ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿಗೆ ನೀಡುವಂತೆ ನ್ಯಾಯಧೀಶರ ಆದೇಶ ನೀಡಿದ್ದಾರೆ.  

ಬಾಲಕಿಯ ವಿರುದ್ದ ಪ್ರಕರಣ:
ಈ ಪ್ರಕರಣದಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದ 16 ವರ್ಷ ಬಾಲಕಿ ಆರಂಭದಲ್ಲಿ ಸುಳ್ಳು ಸಾಕ್ಷಿ ನುಡಿದಿದ್ದು, ಆರೋಪಿ ಪಾರಾಗಲು ಸಹಾಯ ಮಾಡಿರುವುದು ಪಾರ್ಟಿ ಸವಾಲಿನಲ್ಲಿ ಹೊರ ಬಂದಿದ್ದು, ಈ ಹಿನ್ನಲ್ಲೆಯಲ್ಲಿ ಸರ್ಕಾರಿ ಅಭಿಯೋಜಕರು ಬಾಲಕಿಯ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಧೀಶರಿಗೆ ಮನವಿ ಮಾಡಿದರು. ಈ ಮನವಿಯನ್ನ ಪುರಸ್ಕರಿಸಿದ ನ್ಯಾಯಾಧೀಶರು ಬಾಲಕಿಯ ವಿರುದ್ದ ಸಿಆರ್ ಪಿಸಿ ಕಲಂ 340 ಅಡಿಯಲ್ಲಿ ಸುಳ್ಳು ಸಾಕ್ಷಿ ನುಡಿದ ಪ್ರಕರಣವನ್ನ ದಾಖಲಿಸುವಂತೆ ಆದೇಶಿಸಿದ್ದಾರೆ.

See also  ರಸ್ತೆ ಅಪಘಾತ: ಅಣ್ಣ- ತಂಗಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು