ಮೈಸೂರು: ಖ್ಯಾತ ಚಲನಚಿತ್ರ ನಿರ್ದೇಶಕ ದಿ.ಪುಟ್ಟಣ ಕಣಗಾಲ್ ಅವರು ಹುಟ್ಟಿದ ಮನೆಯಲ್ಲಿ ಕಳ್ಳತನ ನಡೆದಿರುವ ಘಟನೆ ಕಣಗಾಲ್ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ದಿ.ಪುಟ್ಟಣಕಣಗಾಲ್ ಅವರ ಹುಟ್ಟುರಾದ ಕಣಗಾಲ್ ಗ್ರಾಮದ ಹುಟ್ಟಿದ ಮನಯಲ್ಲಿ ಕಳ್ಳತನ ನಡೆದಿದ್ದು, ಪುರಾತನ ಕಾಲದ ತಾಮ್ರದ ಕಡಾಯ ಹಾಗೂ ಹಳೆಯ ಗ್ರಂಥಗಳನ್ನ ಕಳ್ಳರು ಕದ್ದೊಯ್ದಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ಮನೆಯಲ್ಲಿ ಯಾರು ವಾಸ ಮಾಡುತ್ತಿರಲಿಲ್ಲ. ಏಕೆಂದರೆ ರಾತ್ರಿ ಸಮಯದಲ್ಲಿ ಹೊರಗಿನಿಂದ ಕಲ್ಲುಗಳು ಬೀಳುತ್ತಿದ್ದವು ಎಂಬ ಭಯದಿಂದ ಅಲ್ಲಿ ವಾಸ ಮಾಡುತ್ತಿದ್ದ ಸಂಬಂಧಿಕರು ಹೆದರಿ ಮನೆ ಬಿಟ್ಟಿದ್ದರು. ಸ್ಥಳಕ್ಕೆ ಬೆಟ್ಟದಪುರ ಪೊಲೀಸರು ಆಗಮಿಸಿದ ಪರಿಶೀಲನೆ ನಡೆಸಿದ್ದಾರೆ.