ಮೈಸೂರು: ನಾನು ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಪಡೆದಿರುವ ಜ್ಞಾನವನ್ನ, ಸರ್ಕಾರದ ಸವಲತ್ತುಗಳನ್ನ ಪರಿಣಾಮಕಾರಿಯಾಗಿ ಫಲಾನುಭವಿಗಳಿಗೆ ತಲುಪಿಸುವಲ್ಲಿ ಕೆಲಸ ಮಾಡುತ್ತೇನೆ ಎಂದು ಕೆಎಎಸ್ ನಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿರುವ ಮೈಸೂರಿನ ಆರ್ .ಐಶ್ವರ್ಯ ಹೇಳಿದ್ದಾರೆ.
ಕೆಎಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿರುವ ಆರ್.ಐಶ್ವರ್ಯ ಮೈಸೂರಿನ ಸಿದ್ದರ್ಥ ನಗರದ ನಿವಾಸಿ ರಾಮಾರಾದ್ಯ ಮತ್ತು ವಾಣಿ ದಂಪತಿಗಳ ಮಗಳಾಗಿದ್ದು ಪ್ರಸ್ತುತ ಬೆಂಗಳೂರಿನ ಭಾರತೀಯ ರಿಸರ್ವ ಬ್ಯಾಂಕ್ ನಲ್ಲಿ ಸಹಾಯಕ ವ್ಯವಸ್ಥಾಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದರ ನಡುವೆ ಕೆಪಿಎಸ್ಸಿಯಲ್ಲಿ ಕನ್ನಡ ಸಾಹಿತ್ಯ ಆಯ್ಕೆಮಾಡಿಕೊಂಡು ಪರೀಕ್ಷೆ ಬರೆದಿದ್ದು, ಈಗ ಮೊಲದ ರ್ಯಾಂಕ್ ಪಡೆದಿದ್ದಾರೆ.
ಹಿನ್ನಲೆ:
ಮೈಸೂರಿನ ಟೆರಿಷಿಯನ್ ಕಾಲೇಜು ಹಾಗೂ ಮರಿಮಲ್ಲಪ್ಪ ವಿದ್ಯಾಶಾಲೆಯಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವ್ಯಾಸಾಂಗ ಮಾಡಿದ್ದು, ಎಸ್ಎಸ್ಎಲ್ ಸಿಯಲ್ಲಿ 4ನೇ ರ್ಯಾಂಕ್, ಪಿಯುಸಿಯಲ್ಲಿ 6ನೇ ರ್ಯಾಂಕ್ ಪಡೆದಿದ್ದು ನಂತರ ಎನ್ ಐಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು ಆರ್ ಬಿಐ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಕೆಳಸ ಮಾಡುತ್ತಿದ್ದಳು. ಈ ನಡುವೆ ಮದುವೆಯಾಗಿದ್ದು 1 ವರ್ಷದ ಮಗು ಇಟ್ಟುಕೊಂಡೆ ಪರೀಕ್ಷೆಗೆ ಸಿದ್ದತೆ ಮಾಡಿಕೊಂಡು ಈತ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ.
ಐಶ್ವರ್ಯ ಕೆಎಎಸ್ ಪರೀಕ್ಷೆಗೆ ಯಾವುದೇ ತರಬೇತಿಯನ್ನ ಪಡೆಯದೆ ಸ್ವತಃ ಶ್ರಮಪಟ್ಟು ಪರೀಕ್ಷೆಯಲ್ಲಿ ಯಶಸ್ಸುಗಳಿಸಿದ್ದು, ಇದಕ್ಕೆ ನಮ್ಮ ಕುಟುಂಬದವರ ಸಹಕಾರ ಕಾರಣ ಎನ್ನುತ್ತಾರೆ ಐಶ್ವರ್ಯ.