ಮೈಸೂರು: ಗುಪ್ತಚರ ಇಲಾಖೆ ನಿಮ್ಮ ಕೈಯಲ್ಲಿದೆ, ಮೈಸೂರಿನಲ್ಲಿ ಏನ್ ನಡೆಯುತ್ತಿದೆ ಎಂಬ ವಿಚಾರ ನಿಮಗೆ ಗೊತ್ತಿಲ್ಲವೇ, ಇದನ್ನೆ ನಾನು ಎಲ್ಲಾ ಕಡೆ ಹೇಳುವುದು ವಾಟ್ ಫಾರ್ ಯುವರ್ ಚೀಫ್ ಮಿನಿಸ್ಟರ್, ಏನ್ ಮುಖ್ಯಂತ್ರಿಗಳೇ ಉಡಾಫೆಯ ಉತ್ತರ ಬೇಕಿಲ್ಲಾ ಎಂದು ಮಾಜಿ ಸಂಸದ ಹೆಚ್.ವಿಶ್ವನಾಥ್ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
ಇಂದು ಶ್ರವಣಬೆಳಗೊಳದ ಕಾರ್ಯಕ್ರಮ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹೆಚ್.ವಿಶ್ವನಾಥ್ ಪಕ್ಷ ಬಿಡುತ್ತಾರೆ ಎಂಬ ಪ್ರಶ್ನೆಗೆ, ಆ ವಿಚಾರ ನನಗೆ ಗೊತ್ತೇ ಇಲ್ಲ ಎಂಬ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ವಿಶ್ವನಾಥ್, ಗುಪ್ತಚರ ಇಲಾಖೆ ನಿಮ್ಮ ಕೈಲಿದೆ, ಮೈಸೂರಿನ ವಿಚಾರ ನಿಮಗೆ ಗೊತ್ತಿಲ್ಲವೇ. ಮೈಸೂರಿನಲ್ಲಿ ಇದ್ದಾಗ ಬಳ್ಳಾರಿಯಲ್ಲಿ ಅಫಘಾತವಾಗಿ 10 ಜನ ಸತ್ತಿದ್ದಾರೆ ಎಂದು ಪತ್ರಕರ್ತರು ಕೇಳಿದರೆ, ಹೌದ.. ನಾನು ಬೆಂಗಳೂರಿಗೆ ಹೋಗಿ ತಿಳಿದು ಹೇಳುತ್ತೇನೆ, ಎಂದು ಉಡಾಫೆ ಉತ್ತರ ನೀಡುತ್ತಾರೆ. ವಾಟ್ ಫಾರ್ ಯುವರ್ ಚೀಫ್ ಮಿನಿಸ್ಟರ್, ಈ ಉಡಾಫೆ ಉತ್ತರ ಬೇಕಿಲ್ಲ ಎಂದು ಸಿಎಂ ವರ್ತನೆಯ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ವಿಶ್ವನಾಥ್, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವವರು ನನ್ನನ್ನು ಅವಮಾನ ಮಾಡುತ್ತಿದ್ದು, 40 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ನನ್ನನ್ನ ಏಕಾಂಗಿ ಮಾಡುತ್ತಿದ್ದು ಈ ಬಗ್ಗೆ ಮನನೊಂದಿರುವ ನಾನು ಮುಂದಿನ ನಡೆಯ ಬಗ್ಗೆ ನನ್ನ ಹಿತೈಷಿಗಳು, ಕಾರ್ಯಕರ್ತರು ಆಪ್ತರ ಸಭೆಯನ್ನ ನಡೆಸುತ್ತಿದ್ದು, ಮುಂದಿನ ತೀರ್ಮಾನದ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುವುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.
ಯಡಿಯೂರಪ್ಪರಿಂದಲೂ ಆಹ್ವಾನ:
ಇತ್ತೀಚಿಗೆ ಕಾಂಗ್ರೆಸ್ ಪಕ್ಷನನ್ನನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದ ಬೇಸತ್ತು, ಜೆಡಿಎಸ್ ಸೇರ್ಪಡೆ ಆಗುತ್ತಾರೆ ಎಂಬ ವಿಚಾರ ತಿಳಿದ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸಹ ನನ್ನನ್ನ ಬಿಜೆಪಿ ಸೇರುವಂತೆ ಆಹ್ವಾನ ನೀಡಿದ್ದರು. ಆದರೆ ನಾನು ನಮ್ಮ ಹಿತೈಷಿಗಳ, ಸ್ನೇಹಿತರ ಸಲಹೆ ಪಡೆಯುತ್ತಿದ್ದೇನೆ ಆದರೆ ಜೆಡಿಎಸ್ ನ ಯಾವುದೇ ನಾಯಕರು ಇಲ್ಲಿಯವರೆಗೆ ನನ್ನನ್ನ ಭೇಟಿಯಾಗಿ ಮಾತುಕತೆ ನಡೆಸಿಲ್ಲ ಎಂದು ಹೇಳಿದ ವಿಶ್ವನಾಥ್, ಕಾಂಗ್ರೆಸ್ ಪಕ್ಷದಲ್ಲಿ ಯಾರು ಹೋದರೇನು, ಯಾರು ಬಿಟ್ಟರೇನು, ನನ್ನದು ಆಯಿತಲ್ಲ ಎಂಬ ಧೋರಣೆ ನಾಯಕರಲಿದೆ ಎಂದು ಹೆಸರನ್ನಳೇದೆ ಸಿಎಂ ವಿರುದ್ದ ವಾಗ್ದಾಳಿ ನಡೆಸಿದರು.