ಗುಂಡ್ಲುಪೇಟೆ: ನರೇಂದ್ರಮೋದಿ ಅಲೆಯಿಂದ ಉತ್ತರಪ್ರದೇಶದಲ್ಲಿ ಗೆದ್ದು ಬೀಗುತ್ತಿದ್ದ ಬಿಜೆಪಿ ಆಟ ಕರ್ನಾಟಕದಲ್ಲಿ ನಡೆಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದ ಎದುರು ನಡೆದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಗೆಲುವಿಗೆ ಶ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಬೃಹತ್ ಸಭೆಯಲ್ಲಿ ಮಾತನಾಡಿ, ಕರ್ನಾಟಕ ಬಸವಣ್ಣನ ನಾಡು, ಸಂತ ಸೂಫಿಗಳ ನಾಡು, ಕಬೀರರ ಬೀಡು. ಈ ನಾಡಿನಲ್ಲಿ ಸಾಮಾಜಿಕ ನ್ಯಾಯ ಇದೆ. ಮಾನವ ಸಮಾಜ ನಿರ್ಮಾಣ ಮಾಡುವುದನ್ನು ಬಿಟ್ಟು ಜಾತಿಯ ವಿಷ ಬೀಜ ಬಿತ್ತಿ ಅಧಿಕಾರ ಪಡೆಯುವ ಬಿಜೆಪಿಯ ಕನಸು ಇಲ್ಲಿ ನನಸಾಗುವುದಿಲ್ಲ ಎಂದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವಂತೆ ಅಭಿವೃದ್ಧಿ ಕೆಲಸ ಮಾಡಿ ಕೂಲಿ ಕೇಳಿದ್ದೆ ಆದರೆ ಮತದಾರರು ಹೆಚ್ಚಿನ ಕೂಲಿ ನೀಡಿದ್ದಕ್ಕೆ ಮತದಾರರಿಗೆ ಸೆಲ್ಯೂಟ್ ಹೊಡೆದು ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಬಿಜೆಪಿ ಸಮಾಜದ ಬದಲಾವಣೆಗೆ ದುಡಿಯೊಲ್ಲ ಜಾತಿ ಧರ್ಮ ಹಿಂದುತ್ವದ ಬಗ್ಗೆ ಮತ ಕೇಳುತ್ತಾರೆ. ಎಲ್ಲೂ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ ಏಕೆಂದರೆ ಅವರು ಅಭಿವೃದ್ದಿ ಮಾಡಿಲ್ಲ ಅಭಿವೃದ್ಧಿ ಅವರಿಗೆ ಗೊತ್ತೂ ಇಲ್ಲ. ಬಿಜೆಪಿ ತಿಪ್ಪರಲಾಗ ಹಾಕಿದರೂ 2018ರ ಮಹಾಚುನಾವಣೆಯಲ್ಲಿ ಗೆಲ್ಲಲ್ಲ ನಾವೇ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದರು.
ಗುಂಡ್ಲುಪೇಟೆ ಮತ್ತು ನಂಜನಗೂಡಿನಲ್ಲಿ ಸೋತ ನಂತರ ಸೋಲೊಪ್ಪಿಕೊಳ್ಳದೆ ಕಾಂಗ್ರೆಸ್ ಪಕ್ಷಹಣ ಹಂಚಿಗೆದ್ದಿದೆ ಎಂದು ಆರೋಪಿಸುತ್ತೀರಲ್ಲ ಜನರು ಹಣ ಪಡೆದು ಮತ ಹಾಕುತ್ತಾರಾ? ಇದು ಮತದಾರರಿಗೆ ಮಾಡಿದ ಅವಮಾನ ಎಂದರು. ಎರಡೂ ಕಡೆಯ ಚುನಾವಣಾ ಪ್ರಚಾರದ ವೇಳೆ ಪೊಲೀಸರೆ ಎಚ್ಚರಿಕೆ, ಕಂದಾಯ ಅಧಿಕಾರಿಗಳೆ ಎಚ್ಚರಿಕೆ, 2018ಕ್ಕೆ ನಾವು ಅಧಿಕಾರಕ್ಕೆ ಬರುತ್ತೇವೆ ನಿಮ್ಮ ಪಟ್ಟಿ ಮಾಡಿಕೊಂಡಿದ್ದೇವೆ. ವಿಧಾನಸೌಧದಲ್ಲಿ ನೋಡಿಕೊಳ್ಳುತ್ತೇವೆಂದು ಹೇಳುತ್ತಾರಲ್ಲ ಇದು ಒಬ್ಬ ಮುಖ್ಯಮಂತ್ರಿಯಾಗಿದ್ದವರು ಆಡೋ ಮಾತಾ? ನಾನೂ ಅವರಂತೆ ಹೇಳಿದರೆ ಅವರಿಗೂ ನನಗೂ ವ್ಯತ್ಯಾಸ ಇರೋದಿಲ್ಲ.
ಬಿಜೆಪಿ ಮುಖಂಡರು ಅಧಿಕಾರಿಗಳು ಕಾಂಗ್ರೆಸ್ ಪರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ನನಗೆ ಬಂದಿರುವ ವರದಿ ಪ್ರಕಾರ ಅಧಿಕಾರಿಗಳು ಬಿಜೆಪಿ ಪರ ಕೆಲಸ ಮಾಡಿದ್ದಾರೆ ಅಂತಿದೆ. ಇದು ಸುಳ್ಳೋ ನಿಜಾನೋ ಗೊತ್ತಿಲ್ಲಎಂದರು. ಯಡಿಯೂರಪ್ಪಮಿಷನ್ 150 ಗೆಲ್ತೀವಿ ಎಂದು ಜೇಬಿನಲ್ಲಿ 150 ಸೀಟು ಇಟ್ಟುಕೊಂಡವರಂತೆ ತಿರುಗುತ್ತಿದ್ದಾರೆ. ಈ ಭಾಗದಲ್ಲಿ ಬಿಜೆಪಿ ಗೆದ್ದಿಲ್ಲ ಮುಂದೇನೂಗೆಲ್ಲಲ್ಲ ಎಂದರು.
ಬಸವಣ್ಣನ ಭಾವಚಿತ್ರ ಕಡ್ಡಾಯ:
ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ ಒಂದು ಸಮಾಜದ ವ್ಯಕ್ತಿಯಲ್ಲ ಆದ್ದರಿಂದ ಎಲ್ಲ್ಲ ಸರ್ಕಾರಿ ಕಚೆೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸಲು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಆದೇಶ ಹೊರಡಿಸಲು ವೇದಿಕೆ ಮುಖಾಂತರ ನಿದೇರ್ಶನ ನೀಡಿರುವುದಾಗಿ ಹೇಳಿದರು.