ಮೈಸೂರು: ಕಾರಿನಲ್ಲಿ ಬಂದ ಹೈಟೆಕ್ ಕಳ್ಳರು ಮನೆ ಮುಂದೆ ನಿಲ್ಲಿಸಿದ ಹೈಟೆಕ್ ಕಾರನ್ನ ಕದ್ದು ಪರಾರಿಯಾಗಿರುವ ಘಟನೆ ನಿನ್ನೆ ರಾತ್ರಿ ನಗರದ ಟಿ.ಕೆ ಲೇಔಟ್ ನಲ್ಲಿ ನಡೆದಿದ್ದು, ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಗರದ ಟಿ.ಕೆ ಲೇಔಟ್ ನ ಸಾಯಿಕುಮಾರ್ ಎಂಬುವವರು ಮನೆ ಮುಂದೆ ನಿಲ್ಲಿಸಿದ ಹೈಟೆಕ್ ಕಾರನ್ನು ನಿನ್ನೆ ರಾತ್ರಿ ಮೂರು ಕಾರುಗಳಲ್ಲಿ ಬಂದ ಹೈಟೆಕ್ ಕಳ್ಳರು ಮೂರು ಕಾರುಗಳನ್ನ ಬೇರೆ ಬೇರೆ ಕಡೆ ನಿಲ್ಲಿಸಿ ಒಂದು ಕಾರಿನಲ್ಲಿ ಬಂದು ಕಳ್ಳತನ ಮಾಡುವ ಕಾರಿನ ಡೋರ್ ತೆಗೆದು ಅದರಲ್ಲಿ 20 ನಿಮಿಷಗಳಿಗೂ ಹೆಚ್ಚುಕಾಲ ಕಾರಿನಲ್ಲಿ ಕುಳಿತು ನಂತರ ಕಾರನ್ನ ಕದ್ದು ಪರಾರಿಯಾಗಿದ್ದಾರೆ ಎನ್ನುತ್ತಾರೆ ಮಾಲೀಕ ಸಾಯಿಕುಮಾರ್.
ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಯಿ ಕುಮಾರ್ ಈ ಸಂಬಂದ ಸರಸ್ವತಿ ಪುರಂ ಠಾಣಾ ಪೊಲೀಸರಿಗೆ ದೂರು ನೀಡಿದ್ದು ದೂರು ದಾಖಲಿಸಿಕೊಂಡಿರುವ ಪೊಲೀಸರು ಹೈಟೆಕ್ ಕಳ್ಳರ ಬಂಧನಕ್ಕೆ ಭಲೆ ಬೀಸಿದ್ದಾರೆ.