ಮೈಸೂರು: ಯಡಿಯೂರಪ್ಪ ಏನ್ ಚುನಾವಣಾ ಕಮಿಷನರ್, ಇಲ್ಲಿಯವರೆಗೆ ಇನ್ ಕಮ್ ಟ್ಯಾಕ್ಸ್ ಕಮಿಷನರ್ ಆಗಿದ್ರು, ಈಗ ಚುನಾವಣಾ ಕಮಿಷನರ್ ಆಗಲು ಹೋರಟಿದ್ದಾರೆ, ಇನ್ನು ಏನೇನಾಗುತ್ತಾರೊ ಎಂದು ಸಿಎಂ ಸಿದ್ದರಾಮಯ್ಯ ಬಿ.ಎಸ್. ಯಡಿಯೂರಪ್ಪ ಬಗ್ಗೆ ವ್ಯಂಗ್ಯವಾಗಿ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಜೊತೆ ಮಾತನಾಡುವಾಗ ನಿನ್ನೆ ಬಿ.ಎಸ್ ಯಡಿಯೂರಪ್ಪ ಚುನಾವನೆ ಯಾವಗ ಬೇಕಾದರೂ ಬರಬಹುದು ಎಂಬ ಹೇಳಿಕೆಗೆ ಖಾರವಾಗಿ ಹಾಗೂ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ ಏನ್ ಎಲೆಕ್ಷನ್ ಕಮಿಷನರ್ ಹಾ., ಇಲ್ಲಿವರೆಗೆ ಇನ್ ಕಮ್ ಟ್ಯಾಕ್ಸ್ ಅಧಿಕಾರಿಯಾಗಿ ಕೆಲಸ ಮಾಡಿದರು. ಈಗ ಚುನಾವಣಾಧಿಕಾರಿಯಾಗಿದ್ದಾರೆ. ಇನ್ನೂ ಏನೇನ್ ಆಗುತ್ತಾರೋ… ಯಡಿಯೂರಪ್ಪ ಮಹಾನ್ ಸುಳ್ಳುಗಾರ, ಸುಳ್ಳು ಹೇಳುವುದರಲ್ಲಿ ನಿಸ್ಸಿಮರು, ಅವರೊಬ್ಬ ಮಹನ್ ಸುಳ್ಳುಗಾರ. ಯಡಿಯೂರಪ್ಪ ಹೇಳಿರುವುದು ಇಲ್ಲಿಯವರೆಗೆ ಯಾವುದಾದರೂ ನಿಜವಾಗಿದೇಯಾ ಎಂದು ವ್ಯಂಗ್ಯವಾಡಿದ ಸಿಎಂ, ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡದೆ ಇರುವುದು ನನಗೆ ಗೌರವ ಎಂದು ಹೇಳಿದರು.
ಮಾಜಿ ಸಂಸದ ಹೆಚ್.ವಿಶ್ವನಾಥ್ ಕಾಂಗ್ರೆಸ್ ತೊರೆಯುವ ಬಗ್ಗೆ ಯಾವುದೇ ಪ್ರತಿಕ್ರಿಯನ್ನ ನೀಡುವುದಿಲ್ಲ. ಕಾಂಗ್ರೆಸ್ ನನ್ನ ತಾಯಿ ಎಂದಿರುವ ವಿಶ್ವನಾಥ್ ಯಾಕೆ ಕಾಂಗ್ರೆಸ್ ಬಿಡುತ್ತಾರೆ. ಅವರು ಕಾಂಗ್ರೆಸ್ ಬಿಡುವುದಿಲ್ಲ ಎಂದು ಪತ್ರಕರ್ತರಿಗೆ ಮರು ಪ್ರಶ್ನೆ ಹಾಕಿದರು.
ಇನ್ನೂ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನೀರಿಕ್ಷೆ ಇಟ್ಟುಕೊಂಡಿರಲಿಲ್ಲ, ಆದರೆ ಆಪ್ ಪಕ್ಷ ಇಟ್ಟುಕೊಂಡಿದ್ದರು. ಮುಂದಿನ ಚುನಾವಣೆಗೆ ಕಾಂಗ್ರೆಸ್ ಚೇತರಿಕೆ ಆಗುತ್ತದೆ ಎಂದು ಹೇಳಿಕೆ ನೀಡಿದರು.
14ನೇ ಹಣಕಾಸಿನ ಆಯೋಗದಲ್ಲಿ ಕರ್ನಾಟಕಕ್ಕೆ ನೀಡಿರುವ ಅನುದಾನ ಕಡಿಮೆಯಿದ್ದು, ಪ್ರಧಾನಿ ಭೇಟಿಯ ವೇಳೆ ಹೆಚ್ಚು ಅನುದಾನ ನೀಡಬೇಕೆಂದು ಪ್ರಧಾನಿಯವರಿಗೆ ಮನವಿ ಮಾಡಿದ್ದೇನೆ. ಜಿಎಸ್ ಟಿಗೆ ನಮ್ಮ ವಿರೋಧವಿಲ್ಲ ಎಂದು ಹೇಳಿ ಗುಂಡ್ಲಪೇಟೆ-ನಂಜನಗೂಡಿನಲ್ಲಿ ನಡೆಯಲಿರುವ ಮತದಾರರಿಗೆ ಕೃತಜ್ಞತ ಸಮಾವೇಶಕ್ಕೆ ಹೊರಟರು.