ಮೈಸೂರು: ಅಂತರಿಕ ಅಂಕಗಳನ್ನ ನೀಡುವಲ್ಲಿ ಪ್ರಾಧ್ಯಪಕರು ತಾರತಮ್ಯ ಹಾಗೂ ದುರ್ವತನೆ ತೋರುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಮೈಸೂರು ವಿವಿಯ ಆಡಳಿತಾಂಗ ಕುಲಸಚಿವರಿಗೆ ದೂರು ನೀಡಿದ ಘಟನೆ ನಡೆದಿದೆ.
ಮೈಸೂರು ವಿವಿಯ ಮಾನಸ ಗಂಗೋತ್ರಿಯ ಪರಿಸರ ವಿಜ್ಞಾನ ವಿಭಾಗದ ಸಹ ಪ್ರಾಧ್ಯಪಕ ಎ.ಜಿ ದೇವಿಪ್ರಸಾದ್ ಅಂತರಿಕ ಅಂಕಗಳನ್ನ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದು, ಪಾಠ ಮಾಡುವ ಸಂಧರ್ಭದಲ್ಲಿ ಅಶ್ಲೀಲ ಜೋಕ್ ಹೇಳುತ್ತಾರೆ ಎಂದು ವಿಭಾಗದ ವಿದ್ಯಾರ್ಥಿಗಳು ಆಡಳಿತಾಂಗ ಕುಲಸಚಿವ ರಾಜಣ್ಣನಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡದ ಕುಲಸಚಿವ ರಾಜಣ್ಣ, ಸಹಪ್ರಾಧ್ಯಪಕ ಎ.ಜಿ. ದೇವಿಪ್ರಸಾದ್ ವಿರುದ್ದ ವಿದ್ಯಾರ್ಥಿಗಳು ದೂರು ನೀಡಿದ್ದು, ಈ ಬಗ್ಗೆ ಮೂರು ದಿನಗಳಲ್ಲಿ ಉತ್ತರ ನೀಡುವಂತೆ ಎ.ಜಿ ದೇವಿ ಪ್ರಸಾದ್ ಗೆ ನೋಟಿಸ್ ನೀಡಿದ್ದು ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಅಲ್ಲದೆ ಅಶ್ಲೀಲ ವೆಬ್ ಸೈಟ್ ಗೆ ವಿದ್ಯಾರ್ಥಿಗಳ ಫೋಟೋ ಹಾಗೂ ಫೋನ್ ನಂಬರ್ ಹಾಕಿರುವ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು.