ಮೈಸೂರು: ನರ್ಸ್ ಗೆ ಲೈಗಿಂಕ ಕಿರುಕುಳ ನೀಡಿ ಆತ್ಮಹತ್ಯೆಗೆ ಕಾರಣನಾದ ವೈದ್ಯನಿಗೆ 2 ವರ್ಷ ಜೈಲು ಹಾಗೂ 3.25 ಲಕ್ಷ ದಂಡ ವಿಧಿಸಿ ನಗರದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆದೇಶ ಹೊರಡಿಸಿದೆ.
ಏನಿದು ಘಟನೆ: ಹುಣಸೂರು ತಾಲೂಕಿನ ಬಿಳಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶುಶ್ರೂಷಕಿಗೆ ವೈದ್ಯ ಹರೀಶ್ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಸಂಬಂಧ ಹಿರಿಯ ಅಧಿಕಾರಿಗಳಿಗೂ ದೂರು ನೀಡಿದರೂ ಏನೂ ಪ್ರಯೋಜನವಾಗದಿದ್ದರಿಂದ ಮನನೊಂದ ಶುಶ್ರೂಷಕಿ 2010ರ ಜನವರಿ 1 ರಂದು ಡೆತ್ ನೋಟ್ ಬರೆದಿಟ್ಟು ಆಸ್ಪತ್ರೆಯಲ್ಲಿಯೇ ವಿಷಕಾರಿ ಮಾತ್ರೆ ಸೇವಿಸಿ ಆತ್ಮಹತ್ಯೆ ಶರಣಾಗಿದ್ದರು. ಡೆತ್ ನೋಟ್ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಜಯಕುಮಾರ್ ವೈದ್ಯ ಹರೀಶ್ ಗೆ 2ವರ್ಷ ಕಠಿಣ ಸಜೆ ಮತ್ತು 3.25 ಲಕ್ಷ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ದಂಡದ ಹಣದಲ್ಲಿ 3 ಲಕ್ಷರೂಗಳನ್ನು ಮೃತ ಶುಶ್ರೂಷಕಿ ಕುಟುಂಬಕ್ಕೆ ನೀಡಬೇಕೆಂದು ಆದೇಶಿಸಿದೆ.