ಮೈಸೂರು: ಯಡಿಯೂರಪ್ಪ ಆಪ್ತ ಬಿ.ಜೆ ಪುಟ್ಟಸ್ವಾಮಿಯನ್ನ ಈಶ್ವರಪ್ಪ ಬಣದ ಕಾರ್ಯಕರ್ತರು ಘೇರಾವ್ ಹಾಕಿ ಮಾತಿನ ಚಕಮಕಿ ನಡೆಸಿದ ಘಟನೆ ಇಂದು ನಗರದ ಬಿಜೆಪಿ ಕಛೇರಿಯಲ್ಲಿ ನಡೆದಿದೆ.
ನಗರದ ನಜರ್ ಬಾದ್ ನಲ್ಲಿರುವ ಬಿಜೆಪಿ ಕಛೇರಿಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಜೆಡಿಎಸ್ ನ ಸದಸ್ಯೆ ಬಿ.ಎಂ ನಟರಾಜ್ ಅವರು ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಆಗಮಿಸಿದ ಹಿಂದುಳಿದ ವರ್ಗಗಳ ಬಿಜೆಪಿ ಅಧ್ಯಕ್ಷ ಬಿ.ಜೆ ಪುಟ್ಟಸ್ವಾಮಿ ವೇದಿಕೆಗೆ ಆಗಮಿಸುವ ಮುನ್ನ ಮಾಧ್ಯಮಗಳಿಗೆ ಮಾತನಾಡುತ್ತ ಪುಟ್ಟಸ್ವಾಮಿ ಕೆ.ಎಸ್ ಈಶ್ವರಪ್ಪ ಬಗ್ಗೆ ವಾಗ್ದಾಳಿ ನಡೆಸುತ್ತಿದಂತೆ ಅಲ್ಲೆ ಇದ್ದ ಈಶ್ವರಪ್ಪ ಬೆಂಬಲಿಗರು ವಿರೋಧ ವ್ಯಕ್ತ ಪಡಿಸಿ ಪುಟ್ಟಸ್ವಾಮಿಯನ್ನ ತಳ್ಳಾಡಿ ಮುತ್ತಿಗೆ ಹಾಕಿ ಮಾತಿನ ಚಕಮಕಿ ನಡೆಸಿದರು.
ಕಾರ್ಯಕರ್ತರು ಈಶ್ವರಪ್ಪ ಪರ ಘೋಷಣೆ ಕೋಗಿದರೆ, ಅಲ್ಲೆ ಇದ್ದ ಯಡಿಯೂರಪ್ಪ ಬಣದ ಕಾರ್ಯಕರ್ತರು ಯಡಿಯೂರಪ್ಪ ಪರ ಘೋಷಣೆ ಕೂಗಿದರು. ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದು, ಕೊನೆಗೆ ಅಲ್ಲೆ ಇದ್ದ ಪೊಲೀಸರು ಹಾಗೂ ಹಿರಿಯ ನಾಯಕರು ಕಾರ್ಯಕರ್ತರನ್ನ ಸಮಾಧಾನ ಪಡಿಸಿ ಪುಟ್ಟಸ್ವಾಮಿ ಅವರನ್ನ ವೇದಿಕೆಗೆ ಕರೆತಂದರು.